ಮನೋರಂಜನೆ

ನೆಹ್ರಾರ ಯಶಸ್ಸಿನ ಗುಟ್ಟನ್ನು ಟ್ವೀಟರ್ ನಲ್ಲಿ ಬಹಿರಂಗಪಡಿಸಿದ ವಿವಿಎಸ್ ಲಕ್ಷ್ಮಣ್…..ಅಂಥಾ ಗುಟ್ಟೇನು …?

Pinterest LinkedIn Tumblr

Ashish-Nehra-taking-rest

ನವದೆಹಲಿ: ಫಾರ್ಮ್ ಕಳೆದುಕೊಂಡು ಟೀಂ ಇಂಡಿಯಾ ತಂಡದಿಂದ ದೂರವಾಗಿದ್ದ ವೇಗಿ ಆಶಿಷ್ ನೆಹ್ರಾ ಮತ್ತೆ ತಂಡದಲ್ಲಿ ಸ್ಥಾನಪಡೆದು ಅಚ್ಚರಿ ಮೂಡಿಸಿದ್ದರು.

ಇದೀಗ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಯಶಸ್ವಿ ಬೌಲರ್ ಎಸಿಕೊಂಡಿದ್ದಾರೆ. ಇನ್ನು ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಕಾರಣವೇನು. ಅವರ ಯಶಸ್ಸಿನ ಹಿಂದಿನ ರಹಸ್ಯವೇನು ಎಂಬುದನ್ನು ಮಾಜಿ ಟೀಂ ಇಂಡಿಯಾ ಆಟಗಾರ ವಿವಿಎಸ್ ಲಕ್ಷ್ಮಣ್ ಟ್ವೀಟರ್ ನಲ್ಲಿ ಬಹಿರಂಗಪಡಿಸಿದ್ದಾರೆ.

21

ಅದೇನಪ್ಪ ಅಂತೀರಾ… ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ನೆಹ್ರಾ ಸುಖವಾಗಿ ಮಲಗಿದ್ದ ಫೋಟೋವನ್ನು ಅಪ್ ಲೋಡ್ ಮಾಡಿರುವ ಲಕ್ಷ್ಮಣ್ ಇದೇ ಅನಿಸುತ್ತದೆ. ಆಸೀಶ್ ನೆಹ್ರಾ ಅವರ ಯಶಸ್ಸಿನ ಹಿಂದಿನ ಗುಟ್ಟು ಎಂದು ತಮಾಷೆ ಮಾಡಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ನೆಹ್ರಾ ಮುಂಬೈ ವಿರುದ್ಧದ ಪಂದ್ಯದಲ್ಲಿ 3 ಓವರ್ ಗಳಲ್ಲಿ 3 ವಿಕೆಟ್ ಪಡೆದು ತಂಡದ ಗೆಲುವಿಗೆ ಪ್ರಮುಖ ಕಾರಣರಾಗಿದ್ದರು.

Write A Comment