ರಾಷ್ಟ್ರೀಯ

ಕಾಯಿಲೆ ವಿಚಾರ ಬಚ್ಚಿಟ್ಟದ್ದಕ್ಕೆ ಪತಿಯನ್ನು ಉಸಿರುಗಟ್ಟಿಸಿ ಕೊಂದ ಪತ್ನಿ !

Pinterest LinkedIn Tumblr

death

ಬರೇಲಿ: ತನ್ನ ಖಾಯಿಲೆ ವಿಚಾರವನ್ನು ಬಚ್ಚಿಟ್ಟಿ ಮದುವೆಯಾದ ಎನ್ನುವ ಕೋಪದಿಂದ ಸ್ವಂತ ಪತ್ನಿಯೇ ಪತಿಯನ್ನು ಕೊಲೆಗೈದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ 40 ವರ್ಷದ ವ್ಯಕ್ತಿಯನ್ನು ಆತನ ಪತ್ನಿಯೇ ಸಹೋದರರೊಂದಿಗೆ ಸೇರಿ ಹತ್ಯೆಗೈದಿದ್ದಾಳೆ. ಅನಾರೋಗ್ಯದಿಂದ ಬಳಲುತ್ತಿದ್ದ ಪತಿ ಹಲವು ವರ್ಷಗಳಿಂದ ಹೆಂಡತಿಯೊಂದಿಗೆ ಹೆಂಡತಿಯ ತವರಿನಲ್ಲಿಯೇ ವಾಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಪತಿ ಅನಾರೋಗ್ಯದ ಕುರಿತು ಪತ್ನಿ ತಿಳಿದಿತ್ತು. ಈ ವಿಚಾರ ತಿಳಿದ ಕೂಡಲೇ ತನ್ನ ಸಹೋದರರಿಗೆ ವಿಚಾರ ಮುಟ್ಟಿಸಿದ ಪತ್ನಿ ಆವರ ಸೂಚನೆಯಂತೆ ಪತಿ ಮಲಗಿದ್ದಾಗ ಸಹೋದರರೊಂದಿಗೆ ಸೇರಿ ಆತನ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಲಾರಿ ಚಾಲಕ ಶುಕ್ರವಾರ ದಿಢೀರ್ ಮೃತಪಟ್ಟಿದ್ದ. ಈ ಬಗ್ಗೆ ಪತ್ನಿಯನ್ನು ವಿಚಾರಿಸಿದಾಗ ಆನಾರೋಗ್ಯದಿಂದ ತನ್ನ ಪತಿ ಸಾವನ್ನಿಪ್ಪಿರುವುದಾಗಿ ಹೇಳಿದಳಾದರೂ, ಸೂಕ್ತ ರೀತಿಯಲ್ಲಿ ಕಾರಣ ನೀಡಿರಲಿಲ್ಲ. ಹೀಗಾಗಿ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಶನಿವಾರ ಮೃತದೇಹವನ್ನು ವಶಪಡಿಸಿಕೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದಾಗ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಆಗ ಪತ್ನಿ ಮತ್ತು ಆಕೆಯ ಸಹೋದರರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೊಳಪಡಿಸಿದಾಗ ಕೊಲೆ ವಿಚಾರ ಬಹಿರಂಗವಾಗಿದೆ. ಪ್ರಸ್ತುತ ಪತ್ನಿ ಮತ್ತು ಆಕೆಯ ಸಹೋದರರು ಪೊಲೀಸರ ವಶದಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ.

Write A Comment