ರಾಷ್ಟ್ರೀಯ

ಪಂ. ರವಿಶಂಕರ್‌ಗೆ ಗೂಗಲ್‌ ಡೂಡಲ್‌ ಗೌರವ

Pinterest LinkedIn Tumblr

Sitarrrನವದೆಹಲಿ (ಪಿಟಿಐ): ಸಿತಾರ್‌ ಮಾಂತ್ರಿಕ ದಿವಂಗತ ಪಂ. ರವಿಶಂಕರ್‌ ಅವರ 96ನೇ ಜನ್ಮದಿನವಾದ ಗುರುವಾರ ಗೂಗಲ್‌ ಸಂಸ್ಥೆಯು ಅವರಿಗೆ ಡೂಡಲ್‌ ಗೌರವ ಸಲ್ಲಿಸಿದೆ.
1920ರ ಏಪ್ರಿಲ್‌ 7ರಂದು ವಾರಣಾಸಿಯಲ್ಲಿ ಜನಿಸಿದ ರವಿಶಂಕರ್‌ ಅವರು ಉಸ್ತಾದ್ ಅಲ್ಲಾದೀನ್ ಖಾನ್ ಅವರಲ್ಲಿ ಸಿತಾರ್‌ ಅಭ್ಯಾಸ ಮಾಡಿದರು.
ಅರವತ್ತರ ದಶಕದಲ್ಲಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಿತಾರ್‌ನ ಇಂಪನ್ನು ಪಸರಿಸಿದ ಕೀರ್ತಿ ರವಿಶಂಕರ್‌ ಅವರದ್ದು.
ರವಿಶಂಕರ್‌ ಅವರು ಡಿಸೆಂಬರ್‌ 11ರಂದು (92ನೇ ವಯಸ್ಸಿನಲ್ಲಿ) ಅಮೆರಿಕದ ಸ್ಯಾಂಟಿಯಾಗೊದಲ್ಲಿ ಸ್ವರಲೀನರಾದರು.

Write A Comment