ರಾಷ್ಟ್ರೀಯ

ಐಐಟಿ ಶುಲ್ಕ ಎರಡು ಪಟ್ಟಕ್ಕೂ ಅಧಿಕ ಹೆಚ್ಚಳ

Pinterest LinkedIn Tumblr

IITನವದೆಹಲಿ (ಪಿಟಿಐ): ಐಐಟಿಯ ಪದವಿ ಪೂರ್ವ ಶೈಕ್ಷಣಿಕ ಕೋರ್ಸ್‌ಗಳ ವಾರ್ಷಿಕ ಶುಲ್ಕವನ್ನು ಎರಡು ಪಟ್ಟಕ್ಕಿಂತಲೂ ಅಧಿಕ ಹೆಚ್ಚಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ.
ಇದೇ ವೇಳೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಅಂಗವಿಕಲ ಹಾಗೂ ಆರ್ಥಿಕ ದುರ್ಬಲ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಲು ನಿರ್ಧಾರ ಕೈಗೊಂಡಿದೆ.
90 ಸಾವಿರ ರೂಪಾಯಿ ಇರುವ ಶುಲ್ಕವನ್ನು 2 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದ್ದು, ‍ಮುಂಬರುವ ಶೈಕ್ಷಣಿಕ ವರ್ಷದಿಂದ ಹೊಸ ಶುಲ್ಕ ಪದ್ಧತಿ ಜಾರಿಗೆ ಬರಲಿದೆ.
ಐಐಟಿ ಸಮಿತಿಯ ಪ್ರಸ್ತಾವವನ್ನು ಪರಿಗಣಿಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಶುಲ್ಕವನ್ನು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತೆಯೇ ಒಂದು ಲಕ್ಷ ರೂಪಾಯಿಗಿಂತಲೂ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೇಕಡ 100ರಷ್ಟು ಶುಲ್ಕ ವಿನಾಯ್ತಿಗೆ ನಿರ್ಧಾರಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

Write A Comment