ರಾಷ್ಟ್ರೀಯ

ಬಿಎಸ್ಎನ್ಎಲ್ ವೈಫಲ್ಯ: 2 ತಾಸು ವಿಮಾನ ಹಾರಾಟಕ್ಕೆ ಅಡ್ಡಿ

Pinterest LinkedIn Tumblr

Flit-bsnl-okಕೋಲ್ಕತ್ತ(ಪಿಟಿಐ): ಬಿಎಸ್ಎನ್ಎಲ್ ಸಂಪರ್ಕ ವೈಫಲ್ಯದಿಂದಾಗಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ (ಎನ್‌ಎಸ್‌ಸಿಬಿ) ಗುರುವಾರ ಎರಡು ತಾಸು ವಿಮಾನ ಹಾರಾಟಕ್ಕೆ ಅಡ್ಡಿಯಾಗಿದೆ.
ದೂರವಾಣಿ ಸಂಪರ್ಕ ಕಡಿತದಿಂದಾಗಿ ಬೆಳಿಗ್ಗೆ 7.30ರಿಂದ 9ರ ಮಧ್ಯೆ ಪೈಲೆಟ್ ಮತ್ತು ವಿಮಾನನಿಲ್ದಾಣ ಅಧಿಕಾರಿಗಳ ಮಧ್ಯೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ.
ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗಿದ್ದರಿಂದ ಬಿಎಸ್ಎನ್ಎಲ್ ಸಂಪರ್ಕ ಸಾಧನ ಕಾರ್ಯನಿರ್ವಹಿಸಲು ಸಾಧ್ಯವಾಗಲಿಲ್ಲ ಎಂದು ಬಿಎಸ್ಎನ್ಎಲ್ ಅಧಿಕಾರಿಗಳು ಹೇಳಿದ್ದಾರೆ.
ಬಿಎಸ್ಎನ್ಎಲ್ ಅಧಿಕಾರಿಗಳು ಆಗಮಿಸಿ ತಾಂತ್ರಿಕ ತೊಂದರೆ ನಿವಾರಿಸಿದ ಬಳಿಕ ವಿಮಾನ ಹಾರಾಟ ಸಹಜ ಸ್ಥಿತಿಗೆ ಮರಳಿತು ಎಂದು ವಿಮಾನನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

Write A Comment