ರಾಷ್ಟ್ರೀಯ

ನನ್ನ ಹೆಸರು ದುರ್ಬಳಕೆ ಮಾಡಲಾಗಿದೆ: ಅಮಿತಾಭ್ ಬಚ್ಚನ್

Pinterest LinkedIn Tumblr

amitabh-panamaನವದೆಹಲಿ: ವಿದೇಶಗಳಲ್ಲಿ ಸಂಪತ್ತನ್ನು ರಹಸ್ಯವಾಗಿ ಹೂಡಿರುವವರ ಕುರಿತು ಪನಾಮಾ ಪೇಪರ್ಸ್ ಸೋರಿಕೆ ಪಟ್ಟಿಯಲ್ಲಿ ತಮ್ಮ ಹೆಸರು ದಾಖಲಾಗಿರುವ ಬಗ್ಗೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಇಂದು ಪ್ರಕಟಣೆ ಹೊರಡಿಸುವ ಅವರು, ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಉಲ್ಲೇಖಿಸಿರುವ ಸೀ ಬಲ್ಕ್ ಶಿಪ್ಪಿಂಗ್ ಕಂಪೆನಿ ಲಿ., ಲೇಡಿ ಶಿಪ್ಪಿಂಗ್ ಲಿ., ಟ್ರೆಷರ್ ಶಿಪ್ಪಿಂಗ್ ಲಿ., ಟ್ರಾಮಾ ಶಿಪ್ಪಿಂಗ್ ಲಿ. ಈ ಯಾವ ಕಂಪೆನಿಗಳ ಬಗ್ಗೆಯೂ ನನಗೆ ಗೊತ್ತಿಲ್ಲ. ಇಲ್ಲಿ ಹೆಸರಿಸಿರುವ ಯಾವ ಕಂಪೆನಿಗಳಿಗೂ ನಾನು ನಿರ್ದೇಶಕನಾಗಿಲ್ಲ. ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ನಾನು ನನ್ನ ಎಲ್ಲಾ ತೆರಿಗೆಗಳನ್ನು ಕಟ್ಟಿದ್ದೇನೆ, ವಿದೇಶಗಳಲ್ಲಿ ನಾನು ಖರ್ಚು ಮಾಡಿರುವ ಹಣಕ್ಕೂ ತೆರಿಗೆ ಕಟ್ಟಿದ್ದೇನೆ, ವಿದೇಶಗಳಿಗೆ ಹಣ ರವಾನಿಸುವಾಗ ಭಾರತದ ತೆರಿಗೆ ಕಟ್ಟಿ ಕಾನೂನು ಅನುಸರಿಸಿಯೇ ಹಣ ಕಳುಹಿಸಿದ್ದೇನೆ. ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿದ್ದೇನೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಬಂದ ವರದಿಯಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಬಚ್ಚನ್ ಹೇಳಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಸೊಸೆ ಐಶ್ವರ್ಯಾ ರೈ ಕೂಡ ನಿನ್ನೆ ತಮ್ಮ ವಿರುದ್ಧದ ಆರೋಪವನ್ನು ತಳ್ಳಿ ಹಾಕಿದ್ದರು.ಇದೊಂದು ಸತ್ಯಕ್ಕೆ ದೂರವಾದ ತಪ್ಪು ಆರೋಪ ಎಂದು ಅವರ ಮಾಧ್ಯಮ ವಕ್ತಾರ ಹೇಳಿಕೆ ನೀಡಿದ್ದರು.

Write A Comment