ರಾಷ್ಟ್ರೀಯ

ಮೋದಿಗೆ ಲೆಕ್ಕಪತ್ರ ಕೇಳಬೇಕಿಲ್ಲ, ಸೋನಿಯಾಗೆ ಷಾ ತಿರುಗೇಟು

Pinterest LinkedIn Tumblr

shah-webನಲ್ಬರಿ (ಅಸ್ಸಾಂ): ಇದು ಲೋಕಸಭೆ ಚುನಾವಣೆಯಲ್ಲ, ವಿಧಾನಸಭೆ ಚುನಾವಣೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ನೀವು ಎರಡು ವರ್ಷದ ಆಡಳಿತಾವಧಿಯ ಲೆಕ್ಕಪತ್ರ ಕೇಳುವುದು ತರವಲ್ಲ- ಹೀಗೆ ಕಾಂಗ್ರೆಸ್ ನಾಯಕಿ ಸೋನಿಯಾಗೆ ತಿರುಗೇಟು ನೀಡಿದವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ.

ಎರಡನೇ ಮತ್ತು ಅಂತಿಮ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, 2019ರಲ್ಲಿ ನಾವು ಮತದಾರರಿಗೆ ಸಮಗ್ರ ಲೆಕ್ಕಪತ್ರ ನೀಡುತ್ತೇವೆ. ಈಗ ನೀವದನ್ನು ಕೇಳುವ ಪ್ರಮೇಯವೇ ಇಲ್ಲ ಎಂದು ಸೋನಿಯಾಗೆ ಚಾಟಿ ಬೀಸಿದರು.

15 ವರ್ಷ ಕಾಂಗ್ರೆಸ್​ಗೆ ಬೆಂಬಲಿಸಿದ್ದ ಇಲ್ಲಿನ ಮತದಾರರು ಪ್ರಧಾನಿಯಾಗಿದ್ದ ಮನಮೋಹನ್​ಸಿಂಗ್ ಅವರಿಗೂ 10 ವರ್ಷ ಆಶೀರ್ವದಿಸಿದ್ದಾರೆ. ಈ ಜನಗಳು ನಿಮಗೇ ಲೆಕ್ಕ ಕೇಳುವ ಮನೋಸ್ಥಿತಿಯಲ್ಲಿದ್ದಾರೆ ಎಂದು ಷಾ ಚುರುಕು ಮುಟ್ಟಿಸಿದರು.

ಬಿಜೆಪಿ-ಎಜಿಪಿ ಸಂಯುಕ್ತವಾಗಿ ಈ ರಾಜ್ಯದಲ್ಲಿ ಬದಲಾವಣೆಯ ಪರ್ವಕ್ಕೆ ನಾಂದಿ ಹಾಡಲು ಸಜ್ಜಾಗಿದೆ. ಮುಕ್ತ ಮತ್ತು ಭ್ರಷ್ಟಾಚಾರ ರಹಿತ ಸರ್ಕಾರ ರಚಿಸಲಿಕ್ಕಾಗಿ ಜನತೆ ನಮಗೆ ಬೆಂಬಲಿಸಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

Write A Comment