ರಾಷ್ಟ್ರೀಯ

ಮೂವರು ದಲಿತ ಯುವಕನ್ನು ರಸ್ತೆ ಮಧ್ಯದಲ್ಲೇ ಬೆತ್ತಲೆಗೊಳಿಸಿ ಥಳಿಸಿದ 6 ಜನರ ಬಂಧನ

Pinterest LinkedIn Tumblr

dalit-beats

ಚಿತ್ತೋರಗಢ್: ಮೇಲ್ಜಾತಿ ವ್ಯಕ್ತಿಯ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಮೂವರು ದಲಿತ ಯುವಕನ್ನು ರಸ್ತೆ ಮಧ್ಯದಲ್ಲೇ ಅಮಾನವೀಯವಾಗಿ ಥಳಿಸಿರುವ ಘಟನೆ ಚಿತ್ತೋರಗಢ್ ನ ಬಸ್ಸಿ ತೆಹ್ಸೀಲ್ ನಲ್ಲಿ ಮಂಗಳವಾರ ನಡೆದಿದೆ.

ಬೈಕ್ ಕಳ್ಳತನ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಮೂವರು ದಲಿತ ಯುವಕರ ಮೇಲೆ ಮುಗಿ ಬಿದ್ದಿದ್ದ ಅಲ್ಲಿನ ಸ್ಥಳೀಯರು, ಯುವಕರನ್ನು ಬೆತ್ತಲೆಗೊಳಿಸಿ ಮರಕ್ಕೆ ಕಟ್ಟಿ ಮನ ಬಂದಂತೆ ಥಳಿಸಿದ್ದಾರೆ. ಆಕ್ರೋಶಿತ ಜನರ ಥಳಿತದಿಂದ ನೋವಿನಿಂದ ಚೀರುತ್ತಿದ್ದ ಯುವಕರು ಸಹಾಯಕ್ಕಾಗಿ ಮೊರೆಇಟ್ಟರಾದರೂ ಯಾರೊಬ್ಬರು ಅವರನ್ನು ಬಿಡಿಸುವ ಪ್ರಯತ್ನವನ್ನು ಮಾಡಿಲ್ಲ.

dalit-children-beaten

ಅಲ್ಲದೆ, ಘಟನೆ ಸಂಬಂಧ ಥಳಿಕ್ಕೊಳಗಾದ ಯುವಕರ ವಿರುದ್ಧವೇ ಸ್ಥಳೀಯರು ಪೊಲೀಸರ ಬಳಿ ಪ್ರಕರಣವನ್ನು ದಾಖಲಿಸಿದ್ದಾರೆ. ಸಾಮಾಜಿಕ ತಾಲತಾಣಗಳಲ್ಲಿ ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಎಸ್’ಸಿ/ಎಸ್’ಟಿ ಕಾಯ್ದೆ ಅಡಿಯಲ್ಲಿ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಪ್ರಕರಣ ಸಂಬಂಧ 6 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

Write A Comment