ಮನೋರಂಜನೆ

ಪನಾಮಾ ಪತ್ರದ ಮಾಹಿತಿ ಅಪ್ಪಟ ಸುಳ್ಳು, ಐಶ್ವರ್ಯ ರೈ ಬಚ್ಚನ್

Pinterest LinkedIn Tumblr

aish

ನವದೆಹಲಿ: ಸೋಮವಾರ ಬಹಿರಂಗಗೊಂಡಿರುವ ಪನಾಮಾ ಪತ್ರಗಳಲ್ಲಿನ ತೆರಿಗೆ ವಂಚಕರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಬಾಲಿವುಡ್ ಚಿತ್ರನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ತಳ್ಳಿಹಾಕಿದ್ದಾರೆ. ‘ವರದಿ ಅಪ್ಪಟ ಸುಳ್ಳು’ ಎಂದು ಐಶ್ವರ್ಯ ರೈ ಅವರ ಮಾಧ್ಯಮ ಸಲಹೆಗಾರರು ಸ್ಪಷ್ಟ ಪಡಿಸಿದ್ದಾರೆ.

ಪಟ್ಟಿಯಲ್ಲಿ ಐಶ್ವರ್ಯ ರೈ, ಅವರ ಮಾವ ಬಾಲಿವುಡ್ ಚಿತ್ರನಟ ಅಮಿತಾಭ್ ಬಚ್ಚನ್ ಸೇರಿದಂತೆ ಸುಮಾರು 500 ಮಂದಿ ಭಾರತೀಯರ ಹೆಸರುಗಳಿವೆ ಎಂದು ವರದಿ ತಿಳಿಸಿತ್ತು. ಅಮಿತಾಭ್ ಬಚ್ಚನ್ ಅವರು ವರದಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪನಾಮಾ ಮೂಲದ ಮೊಸೆಕ್ಸ್ ಫೊನೆಸ್ಕಾ ಎಂಬ ಕಾನೂನು ಸಂಸ್ಥೆಯಿಂದ ಸೋರಿಕೆಯಾಗಿರುವ ರಹಸ್ಯ ಕಡತಗಳ ಪ್ರಕಾರ ವಿಶ್ವದ ಅನೇಕ ಪ್ರಮುಖ ನಾಯಕರು, ವ್ಯಾಪಾರೋದ್ಯಮಿಗಳು, ಚಿತ್ರನಟರು, ರಾಜಕಾರಣಿಗಳು ತೆರಿಗೆ ವಂಚಿಸಿ ವಿದೇಶ ವಹಿವಾಟುಗಳನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ಬಹಿರಂಗಗೊಂಡಿತ್ತು. ಈ ಪನಾಮಾ ಪತ್ರಗಳ ಬರೋಬ್ಬರಿ 1.5 ಮಿಲಿಯನ್ ದಾಖಲೆಗಳನ್ನು ಹೊಂದಿವೆ.

ಐಶ್ವರ್ಯ ರೈ ಮತ್ತು ಅವರ ಕುಟುಂಬ ಸದಸ್ಯರು 2005ರಲ್ಲಿ ನೊಂದಣಿಯಾದ ಅಮಿಕ್ ಪಾರ್ಟ್​ನರ್ಸ್ ಲಿಮಿಟೆಡ್ ಕಂಪೆನಿಯ ನಿರ್ದೆಶಕರಾಗಿ ನೇಮಕಗೊಂಡಿದ್ದರು. ಬಳಿಕ ಅವರನ್ನು ಕಂಪೆನಿಯ ಷೇರುದಾರರು ಎಂದು ತೋರಿಸಲಾಗಿದೆ. ಕಂಪೆನಿ 2008ರಲ್ಲಿ ವಿಸರ್ಜನೆಗೊಂಡಿದೆ. ಡಿಎಲ್​ಎಫ್ ಪ್ರವರ್ತಕರಾದ ಕೆ.ಪಿ. ಸಿಂಗ್ ಅವರು 2010ರಲ್ಲಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್​ನಲ್ಲಿ ನೊಂದಣಿಯಾದ ಕಂಪೆನಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ಕುಟುಂಬವು ಸುಮಾರು 10 ಮಿಲಿಯನ್ (1ಕೊಟಿ) ಡಾಲರ್ ಮೌಲ್ಯದ ಸಾಗರದಾಚೆಗಿನ ಕಂಪೆನಿಗಳಲ್ಲಿ ಪಾಲುದಾರಿಕೆ ಹೊಂದಿದೆ ಎಂದು ವರದಿ ತಿಳಿಸಿತ್ತು.

Write A Comment