ಮನೋರಂಜನೆ

‘ಖತ್ರೋಂ ಕೆ ಖಿಲಾಡಿ 7’ ಗೆದ್ದ ‘ಬಾಲಿಕಾ ವಧು’ ಸಿದ್ಧಾರ್ಥ

Pinterest LinkedIn Tumblr

sidharth

ಮುಂಬೈ: ಅರ್ಜುನ್ ಕಪೂರ್ ಅವರು ನಡೆಸಿದ ಸೆಲೆಬ್ರಿಟಿ ಸ್ಟಂಟ್ ಅಧಾರಿತ ‘ಖತ್ರೋಂ ಕೆ ಖಿಲಾಡಿ, ಕಭೀ ಪೀಡಾ ಕಭೀ ಕೀಡಾ’ ಮೈನವಿರೇಳಿಸುವ ಪ್ರದರ್ಶನದಲ್ಲಿ ‘ಬಾಲಿಕಾ ವಧು’ ನಟ ಸಿದ್ಧಾರ್ಥ ಶುಕ್ಲ ಅವರು ಜಯಗಳಿಸಿದ್ದಾರೆ.

ಅಂತಿಮ ಹಂತದಲ್ಲಿದ್ದ ಸನಾ ಸಯೀದ್ ಮತ್ತು ಮುಕ್ತಿ ಮೋಹನ್ ಅವರನ್ನು ಸೋಲಿಸುವ ಮೂಲಕ ಸಿದ್ಧಾರ್ಥ ಅವರು ಕಲರ್ಸ್ ಶೋದಲ್ಲಿ ವಿಜಯಗಳಿಸಿ, 25 ಲಕ್ಷ ರೂಪಾಯಿ ನಗದು ಮತ್ತು ಹೊಸ ಟಾಟಾ ಟಿಯಾಗೊ ಕಾರನ್ನು ಬಾಚಿಕೊಂಡಿದ್ದಾರೆ.

35ರ ಹರೆಯದ ಶುಕ್ಲ ಗಾಯವಾದರೂ ಬಿಡದೆ ಅಪೂರ್ವ ಮಾನಸಿಕ ಹಾಗೂ ದೈಹಿಕ ದೃಢತೆ ಪ್ರದರ್ಶಿಸಿ ಸ್ಟಂಟ್ ಸವಾಲುಗಳನ್ನು ಎದುರಿಸುವ ಮೂಲಕ ಪ್ರದರ್ಶನದುದ್ದಕ್ಕೂ ಮೊದಲ ಸ್ಥಾನದಲ್ಲೇ ಮಿಂಚಿದರು. ಅಂತಿಮ ಪ್ರದರ್ಶನದಲ್ಲಂತೂ ಅವರು ನೀರು, ಗಾಳಿ9 ಮತ್ತು ಬೆಂಕಿಯ ಮಧ್ಯೆ ವಿವಿಧ ಸ್ಟಂಟ್​ಗಳನ್ನು ಪ್ರದರ್ಶಿಸಿದರು.

Write A Comment