ರಾಷ್ಟ್ರೀಯ

ನಾವು ಮಾಡಿದ ಕೆಲವು ತಪ್ಪುಗಳು ಸೋಲಿಗೆ ಕಾರಣವಾಯಿತು : ವಿರಾಟ್ ಕೋಹ್ಲಿ ವಿಷಾದ

Pinterest LinkedIn Tumblr

kohiliನವದೆಹಲಿ, ಏ.4- ನಮ್ಮಿಂದಾದ ತಪ್ಪನ್ನು ತಿದ್ದುಕೊಳ್ಳಲು ಪ್ರಯತ್ನಿಸುತ್ತೇವೆ. ಅಭಿಮಾನಿಗಳು ತಮಗೆ ನೀಡಿದ ಬೆಂಬಲಕ್ಕೆ ನಾವು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಭಾರತ ಕ್ರಿಕೆಟ್ ತಂಡದ ಉಪ ನಾಯಕ ವಿರಾಟ್ ಕೋಹ್ಲಿ ತಿಳಿಸಿದ್ದಾರೆ.

ಐಸಿಸಿ ವಿಶ್ವಕಪ್ ಟಿ-20 ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಪಾತ್ರರಾದ ವಿರಾಟ್ ಕೋಹ್ಲಿ ಟ್ವಿಟರ್ ಮೂಲಕ ತಮ್ಮ ಅನಿಸಿಕೆಗಳನ್ನು ಬಿಚ್ಚಿಟ್ಟಿದ್ದಾರೆ. ಚಾಂಪಿಯನ್ ಪಟ್ಟಕ್ಕೇರಬೇಕೆಂಬ ಅದೆಷ್ಟೋ ಕೋಟ್ಯಾನುಕೋಟಿ ಅಭಿಮಾನಿಗಳು ನಮ್ಮ ಮೇಲೆ ಭಾರೀ ನಿರೀಕ್ಷೆ ಇಟ್ಟಿದ್ದರು. ಆದರೆ ನಾವು ಮಾಡಿದ ಕೆಲವು ತಪ್ಪುಗಳು ನಮಗೆ ಅಡ್ಡಿಯಾಯಿತು. ಇದನ್ನು ತಿದ್ದುಕೊಳ್ಳಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ಪಂದ್ಯಾವಳಿಯುದ್ದಕ್ಕೂ ಅಭಿಮಾನಿಗಳು ನನ್ನ ಮೇಲೆ ಇಟ್ಟಿದ್ದ ಪ್ರೀತಿ, ವಿಶ್ವಾಸ, ಪ್ರೋತ್ಸಾಹಕ್ಕೆ ನಾನು ಆಬಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.

Write A Comment