ರಾಷ್ಟ್ರೀಯ

ಹುಷಾರ್, ಎಟಿಎಂಗಳು ಇನ್ನು ರಾತ್ರಿ ನಿಮ್ಮನ್ನು ನಿರಾಸೆಗೊಳಿಸಬಹುದು!

Pinterest LinkedIn Tumblr

03-atm-webನವದೆಹಲಿ: ರಾತ್ರಿ ತಡವಾಗಿ ಬ್ಯಾಂಕ್​ನಿಂದ ಹಣ ಹಿಂಪಡೆಯಬಯಸಿದರೆ ಇನ್ನು ಮುಂದೆ ಎಟಿಎಂಗಳು ನಿಮ್ಮನ್ನು ನಿರಾಸೆಗೊಳಿಸಲು ಆರಂಭಿಸಬಹುದು. ಏಕೆಂದರೆ ಎಟಿಎಂಗಳಿಗೆ ನಗದು ಪುನರ್​ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.

ಸಾಯಂಕಾಲದ ಬಳಿಕ ಎಟಿಎಂನಿಂದ ಹಣ ಪಡೆಯಬಯಸುವ ಸಹಸ್ರಾರು ಮಂದಿಯನ್ನು ಭ್ರಮನಿರಸನಗೊಳಿಬಲ್ಲಂತಹ ನಿಯಮಗಳನ್ನು ಸರ್ಕಾರ ಶೀಘ್ರವೇ ಜಾರಿಗೆ ತರುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

‘ರಾತ್ರಿ 8 ಗಂಟೆಯ ಬಳಿಕ ಎಟಿಎಂಗಳನ್ನು ಪುನರ್​ಭರ್ತಿ ಮಾಡಬಾರದು ಎಂಬ ಪ್ರಸ್ತಾವವನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ಎಟಿಎಂಗಳಿಗೆ ಹಣ ಭರ್ತಿ ಮಾಡುವ ಖಾಸಗಿ ನಗದು ಹಣ ಸಾಗಣೆ ಸಂಸ್ಥೆಗಳು ಬ್ಯಾಂಕುಗಳಿಂದ ದಿನದ ಪೂರ್ವಾರ್ಧದಲ್ಲಿ ಅಂದರೆ ಮಧ್ಯಾಹ್ನಕ್ಕೆ ಮೊದಲೇ ನಗದು ಸಂಗ್ರಹ ಮಾಡಿಕೊಳ್ಳಬೇಕು. ಅಲ್ಲದೆ ಸಿಸಿಟಿವಿ ಮತ್ತು ಜಿಪಿಎಸ್ ಅಳವಡಿಕೆಯಾಗಿರುವ ವಿಶೇಷ ವಿನ್ಯಾಸದ ನಗದು ವ್ಯಾನ್​ಗಳನ್ನು ಇದಕ್ಕಾಗಿ ಬಳಸಬೇಕು, ಒಂದು ಟ್ರಿಪ್​ನಲ್ಲಿ 5 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಒಯ್ಯುವಂತಿಲ್ಲ. ಯಾವುದೇ ಅಹಿತಕರ ಘಟನೆ ನಿಭಾಯಿಸಲು ಇಬ್ಬರು ಸಶಸ್ತ್ರ ಗಾರ್ಡ್​ಗಳಿರಬೇಕು ಮತ್ತು ವಿಶೇಷ ಪರಿಸ್ಥಿತಿ ನಿಭಾಯಿಸಲು ಚಾಲಕರಿಗೆ ತರಬೇತಿ ನೀಡಿರಬೇಕು, ಚಾಲಕ ಸುರಕ್ಷಿತವಾಗಿ ವಾಹನ ಚಲಾಯಿಸಲು ಸಮರ್ಥನಾಗಿರಬೇಕು’ ಇತ್ಯಾದಿ ನಿಯಮಾವಳಿಗಳನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದು ವರದಿಗಳು ಹೇಳಿವೆ.

Write A Comment