ರಾಷ್ಟ್ರೀಯ

ಇನ್ನುಮುಂದೆ ಹುಡುಗರಿಗೂ 18 ವರ್ಷಕ್ಕೆ ಮದುವೆ?

Pinterest LinkedIn Tumblr

marriedನವದೆಹಲಿ: ಭಾರತದಲ್ಲಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿರುವ ಕೇಂದ್ರ ಸರ್ಕಾರದ ಉನ್ನತಾಧಿಕಾರಿಗಳ ಸಮಿತಿ, 18 ವರ್ಷಕ್ಕೆ ಮೇಲ್ಪಟ್ಟ ಹುಡುಗ ಹಾಗೂ ಹುಡುಗಿಯರು ವಿವಾಹವಾಗುವುದನ್ನು ಕಾನೂನಾತ್ಮಕವೆಂದು ಪರಿಗಣಿಸಬೇಕೆಂದು ಶಿಫಾರಸ್ಸು ಮಾಡಿದೆ.
ದೇಶದಲ್ಲಿ ಹಿಂದೂ ವಿವಾಹ ಕಾಯ್ದೆ ಹಾಗೂ ಇನ್ನಿತರೆ ವಿಶೇಷ ವಿವಾಹ ಕಾಯ್ದೆಗಳಲ್ಲಿ ವಿವಾಹ ವಯಸ್ಸನ್ನು ಹೆಣ್ಣು ಮಕ್ಕಳಿಗೆ 18 ವರ್ಷ ಹಾಗೂ ಗಂಡು ಮಕ್ಕಳಿಗೆ 21 ವರ್ಷವನ್ನು ನಿಗದಿಪಡಿಸಿದೆ. ಆದರೆ ಈ ಕಾಯ್ದೆಗಳು ಲಿಂಗ ತಾರತಮ್ಯವನ್ನು ಉಂಟು ಮಾಡುತ್ತಿದೆ ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿಕೊಂಡಿದೆ.
ಇಷ್ಟೇ ಅಲ್ಲದೇ ಸಮಿತಿ ತನ್ನ ವರದಿಯಲ್ಲಿ ಮುಸ್ಲಿಂ ಮಹಿಳೆಯರಿಗೆ ಹಾಗೂ ಲಿವಿಂಗ್ ಟುಗೆದರ್ ಸಂಬಂಧ ಹೊಂದಿರುವ ಮಹಿಳೆಯರಿಗೆ ಜೀವನಾಂಶ ನೀಡುವ ಬಗ್ಗೆ ಉಲ್ಲೇಖಿಸಿದೆ. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳ ವೈಯಕ್ತಿಕ ಕಾನೂನುಗಳ ಬಗ್ಗೆ ಉಲ್ಲೇಖ ಮಾಡಿರುವ ಅಧಿಕಾರಿಗಳು, ಮಹಿಳೆ ಮತ್ತು ಕುಟುಂಬಗಳ ಕಾನೂನು ಜೊತೆಗೆ ವಿವಾಹದ ಮೇಲಿನ ಗೌರವ, ವಿಚ್ಛೇದನ, ರಕ್ಷಣೆ, ಪಾಲನೆ ಮತ್ತು ಉತ್ತರಾಧಿಕಾರಗಳಲ್ಲಿಯೂ ಲಿಂಗ ತಾರತಮ್ಯಗಳನ್ನು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಲಾಖ್(ವಿಚ್ಚೇದನಾ ಪ್ರಕರಣ) ಮತ್ತು ಬಹುಪತ್ನಿತ್ವದಂತಹ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದಿದೆ.
ಒಟ್ಟಿನಲ್ಲಿ ಸಮಿತಿಯ ’18 ವರ್ಷಕ್ಕೆ ವಿವಾಹ ವಯಸ್ಸನ್ನು ನಿಗದಿ’ ಶಿಫಾರಸ್ಸನ್ನು ಸರಕಾರ ಅಂಗೀಕರಿಸಿದರೆ, ಹದಿಹರೆಯದ ಯುವಕ-ಯುವತಿಯರಿಗೆ ಸಿಹಿಸುದ್ದಿ ಸಿಗಲಿದೆ.

Write A Comment