ರಾಷ್ಟ್ರೀಯ

‘ನಿಜವಾದ ರಾಷ್ಟ್ರಗೀತೆ ವಂದೇ ಮಾತರಂ, ಜನ ಗಣ ಮನ ಅಲ್ಲ’ ?

Pinterest LinkedIn Tumblr

Indian-ricolorಮುಂಬಯಿ : ಭಾರತ್‌ ಮಾತಾ ಕೀ ಜೈ ಕುರಿತಾಗಿ ಆರ್‌ ಎಸ್‌ ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ವ್ಯಕ್ತಪಡಿಸಿದ ಅಭಿಪ್ರಾಯವು ದೇಶಾದ್ಯಂತ ವಿವಾದಕ್ಕೆ ಕಾರಣವಾದ ಕೆಲ ಸಮಯದ ಬಳಿಕ ಇದೀಗ ಆರ್‌ ಎಸ್‌ ಎಸ್‌ ಪ್ರಧಾನ ಕಾರ್ಯದರ್ಶಿ ಭಯ್ನಾಜಿ ಜೋಷಿ ಅವರು “ವಂದೇ ಮಾತರಂ ನಿಜವಾದ ರಾಷ್ಟ್ರಗೀತೆಯೇ ಹೊರತು ಜನ ಗಣ ಮನ ಅಲ್ಲ’ ಎಂದು ಹೇಳಿ ಇನ್ನೊಂದು ವಿವಾದಕ್ಕೆ ಕಾರಣರಾಗಿದ್ದಾರೆ.

“ಜನ ಗಣ ಮನ ಇಂದು ನಮ್ಮ ರಾಷ್ಟ್ರಗೀತೆಯಾಗಿದೆ. ಆದುದರಿಂದ ನಾವೆಲ್ಲರೂ ಅದನ್ನು ಗೌರವಿಸಬೇಕು; ಅನ್ಯಥಾ ಅದು ಯಾವುದೇ ಭಾವನೆಗಳನ್ನು ಸೃಷ್ಟಿಸುವುದಕ್ಕೆ ಕಾರಣವೇ ಇಲ್ಲ’ ಎಂದು ಭಯ್ನಾಜಿ ಜೋಷಿ ಹೇಳಿದ್ದಾರೆ.

“ನಮ್ಮ ಸಂವಿಧಾನವು ನಿರ್ಧರಿಸಿರುವ ಪ್ರಕಾರ ಜನ ಗಣ ಮನವೇ ರಾಷ್ಟ್ರಗೀತೆಯಾಗಿದೆ. ಆದರೆ ಯಾರಾದರೂ ನೈಜ ಅರ್ಥವನ್ನು ಪರಿಗಣಿಸುವುದೇ ಆದರೆ ವಂದೇ ಮಾತರಂ ನಿಜವಾದ ರಾಷ್ಟ್ರಗೀತೆಯಾಗಿದೆ; ಹಾಗಿದ್ದರೂ ಸಂವಿಧಾನದ ಮೂಲಕ ನಾವು ಏನನ್ನು ರೂಪಿಸಿಕೊಳ್ಳುವೆವೋ ಅದು ರಾಷ್ಟ್ರೀಯವಾಗಿದೆ; ಅಂತೆಯೇ ಜನ ಗಣ ಮನ’ ಎಂದು ಭಯ್ನಾಜಿ ಜೋಷಿ ಅವರು ದೀನಾದಯಾಳ್‌ ಉಪಾಧ್ಯಾಯ ಸಂಶೋಧನ ವಿದ್ಯಾಲಯದಲ್ಲಿ ಏರ್ಪಟ್ಟ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

“ಜನ ಗಣ ಮನವನ್ನು ಬರೆದದ್ದು ಯಾವಾಗ ? ಸ್ವಲ್ಪ ಸಮಯದ ಹಿಂದೆ. ಆದರೆ ಜನಗಣಮನವನ್ನು ಬರೆಯುವಾಗ ಸರಕಾರವನ್ನು ದೃಷ್ಟಿಯಲ್ಲಿರಿಸಿಕೊಂಡು ಬರೆಯಲಾಯಿತು. ಆದರೆ ವಂದೇ ಮಾತರಂ ಗೀತೆ ನಮ್ಮ ದೇಶದ ನೈಜ ಸ್ವಭಾವ, ಸ್ವರೂಪ ಮತ್ತು ಶೈಲಿಯನ್ನು ಪ್ರತಿನಿಧಿಸುತ್ತದೆ. ಇದುವೇ ಈ ಎರಡು ಗೀತೆಗಳ ನಡುವಿನ ವ್ಯತ್ಯಾಸವಾಗಿದೆ. ಅಂತೆಯೇ ಎರಡೂ ಗೀತೆಗಳನ್ನು ನಾವು ಗೌರವಿಸಬೇಕು’ ಎಂದು ಭಯ್ನಾಜಿ ಜೋಷಿ ಹೇಳಿದರು.

‘ವಂದೇ ಮಾತರಂ’ ಎಂದರೆ ‘ತಾಯೇ, ನಾನು ನಿನ್ನನ್ನು ವಂದಿಸುತ್ತೇನೆ’ ಎಂಬುದಾಗಿದೆ. ಮಾತೃಭೂಮಿಯನ್ನು ಗೌರವಿಸಿ ವಂದಿಸುವುದಕ್ಕಾಗಿ ಈ ಗೀತೆಯನ್ನು ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ಬರೆದಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂ ಬಹುಮುಖ್ಯವಾದ ಪಾತ್ರವನ್ನು ವಹಿಸಿತ್ತು. 1950ರಲ್ಲಿ ವಂದೇ ಮಾತರಂ ಗೀತೆಯ ಮೊದಲೆರಡು ಚರಣಗಳಿಗೆ ರಾಷ್ಟೀಯ ಗೀತೆ ಎಂಬ ಅಧಿಕೃತ ಸ್ಥಾನಮಾನ ನೀಡಲಾಗಿತ್ತು. ಇದು ರಾಷ್ಟ್ರಗೀತೆ ಜನಗಣಮನಕ್ಕಿಂತಲೂ ವಿಶಿಷ್ಟವಾದದ್ದೆಂಬ ವ್ಯಾಪಕ ಅಭಿಪ್ರಾಯ ಸೃಷ್ಟಿಸಿತ್ತು ಎಂದು ಜೋಷಿ ಹೇಳಿದರು.
-ಉದಯವಾಣಿ

Write A Comment