ರಾಷ್ಟ್ರೀಯ

ಮಲ್ಯಗೆ ಮತ್ತೆ ಸಮನ್ಸ್; ಏ. 9ರಂದು ಹಾಜರಿಗೆ ಸೂಚನೆ

Pinterest LinkedIn Tumblr

Mallyaನವದೆಹಲಿ/ಮುಂಬೈ (ಪಿಟಿಐ): ಸಾಲದ ಸುಳಿಯಲ್ಲಿ ಸಿಲುಕಿರುವ ಉದ್ಯಮಿ ವಿಜಯ್ ಮಲ್ಯಗೆ ಮೂರನೇ ಬಾರಿಗೆ ಸಮನ್ಸ್ ಜಾರಿಗೊಳಿಸಿರುವ ಜಾರಿ ನಿರ್ದೇಶನಾಲಯ(ಇ.ಡಿ), ಏಪ್ರಿಲ್ 9ರಂದು ಮುಂಬೈನಲ್ಲಿ ಹಾಜರಾಗುವಂತೆ ಸೂಚಿಸಿದೆ.
900 ಕೋಟಿ ರೂಪಾಯಿ ಐಡಿಬಿಐ ಸಾಲ ವಂಚನೆ ಪ್ರಕರಣ ಸಂಬಂಧ ಇ.ಡಿ ಎರಡು ಬಾರಿ ಸಮನ್ಸ್ ನೀಡಿದ್ದರೂ, ಮಲ್ಯ ಕಾರಣಗಳನ್ನು ಮುಂದೆಯೊಡ್ಡಿ ಮತ್ತಷ್ಟು ಸಮಯಾವಕಾಶ ಕೋರಿದ್ದರು.
ಮುಂಬೈನಲ್ಲಿರುವ ಇ.ಡಿಯ ವಲಯ ಕಚೇರಿಗೆ ಹಾಜರಾಗಲು ಸಾಧ್ಯವಾಗದು ಎಂದಿದ್ದ ಮಲ್ಯ, ಮೇ ತಿಂಗಳ ವರೆಗೆ ಕಾಲಾವಕಾಶ ನೀಡುವಂತೆ ಮತ್ತೆ ಸಮಯ ಕೋರಿದ್ದರು.
ಏಪ್ರಿಲ್ 9ರಂದು ಖುದ್ದು ಹಾಜರಾಗುವಂತೆ ಸೂಚಿಸಿ ಮಲ್ಯ ಅವರಿಗೆ ಇ.ಡಿಯ ಮುಂಬೈ ಕಚೇರಿಯ ತನಿಖಾಧಿಕಾರಿ ಸಮನ್ಸ್ ಜಾರಿಗೊಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Write A Comment