ರಾಷ್ಟ್ರೀಯ

ಕೋರ್ಟ್‌ ಆದೇಶವಿದ್ದರೂ ದೇಗುಲ ಪ್ರವೇಶಕ್ಕೆ ಸ್ಥಳೀಯರ ಅಡ್ಡಿ

Pinterest LinkedIn Tumblr

shaniwebಅಹ್ಮದ್‌ನಗರ (ಪಿಟಿಐ): ಬಾಂಬೆ ಹೈಕೋರ್ಟ್‌ ಆದೇಶ ಇದ್ದರೂ ಅಹ್ಮದ್‌ನಗರ ಜಿಲ್ಲೆಯ ಶನಿ ಶಿಂಗ್ಣಾಪುರ ಬಯಲು ದೇವಾಲಯದ ಪ್ರವೇಶಕ್ಕೆ ಮುಂದಾದ ಭೂಮಾತ ಬ್ರಿಗೇಡ್‌ ಮುಖ್ಯಸ್ಥೆ ತೃಪ್ತಿ ದೇಸಾಯಿ ಮತ್ತು ಬೆಂಬಲಿಗರನ್ನು ಸ್ಥಳೀಯರು ಮತ್ತು ದೇವಾಲಯದ ಸಿಬ್ಬಂದಿ ತಡೆದ ಘಟನೆ ಶನಿವಾರ ನಡೆದಿದೆ.
‘ದೇವಾಲಯಗಳಲ್ಲಿ ಪೂಜೆ ಸಲ್ಲಿಸುವುದು ಮಹಿಳೆಯರ ಮೂಲಭೂತ ಹಕ್ಕು. ಈ ಹಕ್ಕನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ’ ಎಂದು ಎಂದು ಬಾಂಬೆ ಹೈಕೋರ್ಟ್‌ ಶುಕ್ರವಾರ ತೀರ್ಪು ನೀಡಿತ್ತು. ಈ ತೀರ್ಪಿನೊಂದಿಗೆ ಶನಿವಾರ ದೇವಾಲಯ ಪ್ರವೇಶಿಸಲು ಬಂದ ಭೂಮಾತ ಬ್ರಿಗೇಡ್‌ ಸದಸ್ಯೆಯರನ್ನು ಸ್ಥಳೀಯರು ದೇವಸ್ಥಾನ ಆವರಣದ ಮಧ್ಯಭಾಗದಲ್ಲಿ ತಡೆದರು. ಮುಖ್ಯ ಭಾಗದಲ್ಲಿರುವ ಶನಿ ಶಿಲೆ ಸ್ಪರ್ಶಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಲಿಲ್ಲ. ಸ್ಥಳೀಯರ ಗುಂಪೊಂದು ಅವರನ್ನು ಮುತ್ತಿಕೊಂಡು ಹಿಂದಕ್ಕೆ ತಳ್ಳಿದರು. ನಂತರ ಪೊಲೀಸರು ಭೂಮಾತಾ ಬ್ರಿಗೇಡ್‌ ಸದಸ್ಯೆಯರನ್ನು ಶನಿ ಶಿಲೆಯ ಇರುವ ಸ್ಥಳದಿಂದ 100 ಮೀಟರ್‌ ದೂರಕ್ಕೆ ಕೊಂಡೊಯ್ಯದರು.
ಹೈಕೋರ್ಟ್‌ ಆದೇಶವನ್ನು ಗೌರವಿಸಿ, ದೇವಾಲಯ ಪ್ರವೇಶಕ್ಕೆ ಅವಕಾಶ ನೀಡದಿದ್ದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡಣವಿಸ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವುದಾಗಿ ತೃಪ್ತಿ ದೇಸಾಯಿ ಹೇಳಿದ್ದಾರೆ.
ಶನಿವಾರ ತಮ್ಮನ್ನು ತಡೆದ ಸ್ಥಳೀಯರ ವಿರುದ್ಧ ಮತ್ತು ಪ್ರವೇಶ ಕಲ್ಪಿಸಲು ವಿಫಲರಾದ ಸ್ಥಳೀಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸುವುದಾಗಿಯೂ ಅವರು ಹೇಳಿದ್ದಾರೆ.

Write A Comment