ಮನೋರಂಜನೆ

ಬಾಲಯ್ಯ 100 ನೇ ಚಿತ್ರದಲ್ಲಿ ನಯನತಾರಾ ಜೊತೆ ರೋಮ್ಯಾನ್ಸ್

Pinterest LinkedIn Tumblr

new-movie

ಹೈದರಾಬಾದ್: ನಂದಮೂರಿ ಬಾಲಕೃಷ್ಣ ಅವರ 100 ನೇ ಚಿತ್ರದಲ್ಲಿ ನಯನತಾರಾ ಅಭಿನಯಿಸಲಿದ್ದಾರೆ, ಯೋಧುಡು ಚಿತ್ರದಲ್ಲಿ ಬಾಲಯ್ಯನಿಗೆ ನಾಯಕಿಯಾಗಿ ನಯನತಾರ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕ್ರಿಶ್ ಜಗರ್ಲಾ ಮೂಡಿ ಚಿತ್ರ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಎಲ್ಲಾ ವಿಷಯಗಳಲ್ಲೂ ಪಕ್ಕಾ ಪರಿಪೂರ್ಣತೆ ಬಯಸುತ್ತಾರೆ. ಹೀಗಾಗಿ ಅವರ ಎದುರು ಉತ್ತಮವಾಗಿ ನಟಿಸುವ ನಾಯಕಿ ಬೇಕಾಗಿತ್ತು.

ಅನುಷ್ಕಾ ಶೆಟ್ಟಿ ತಮನ್ನಾ ಭಾಟಿಯಾ ರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು, ಆದರೆ ಬಾಲಯ್ಯ ವಿರುದ್ಧ ಪ್ರೌಢ ಅಭಿನಯಕ್ಕೆ ನಯನತಾರಾ ಸೂಕ್ತ ಎಂದು ಮನಗಂಡು ಅವರನ್ನೇ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.

ಬಾಲಯ್ಯ ಅವರ ನೂರನೇ ಚಿತ್ರ ನಿರ್ದೇಶನ ಮಾಡಲು ನಿರ್ದೇಶಕರುಗಳಾದ ಕ್ರಿಶ್ ಜಗರ್ಲಾಮೂಡಿ ಮತ್ತು ವಂಶಿ ಕೃಷ್ಣ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಕ್ರಿಶ್ ಗೆ ನಿರ್ದೇಶನದ ಹೊಣೆ ದೊರೆತಿದೆ.

ಐತಿಹಾಸಿಕ ಕಥೆಯ ಹಿನ್ನೆಲೆಯಿರುವ ಈ ಚಿತ್ರ ಕುರಿತು ಏಪ್ರಿಲ್ 8 ಅಂದರೆ ಯುಗಾದಿ ಹಬ್ಬದಂದು ಬಾಲಯ್ಯ ಚಿತ್ರದ ಬಗ್ಗೆ ಅಧಿಕೃತವಾಗಿ ಹೇಳಲಿದ್ದಾರೆ.

Write A Comment