ರಾಷ್ಟ್ರೀಯ

‘ಕಾಂಗ್ರೆಸ್ ಶಾಸಕನ ನಾಲಿಗೆ ಕತ್ತರಿಸುತ್ತೇನೆ’

Pinterest LinkedIn Tumblr

nitish-kumar-new-e1459425655272ಪಾಟ್ನಾ: ಬಿಹಾರ್ ರಾಜ್ಯದಲ್ಲಿ ಜೆಡಿಯು ಮತ್ತು ಕಾಂಗ್ರೆಸ್ ಪಕ್ಷಗಳು ಮೈತ್ರಿಕೂಟದಲ್ಲಿದ್ದರೂ ಉಭಯ ಪಕ್ಷಗಳ ಸದಸ್ಯರು ವಿಧಾನಸೌಧದ ಮುಂಭಾಗದಲ್ಲಿಯೇ ಪರಸ್ಪರ ವಾಗ್ವಾದದಲ್ಲಿ ತೊಡಗಿರುವುದು ಆಘಾತ ಮೂಡಿಸಿದೆ.

ಜೆಡಿಯು ಶಾಸಕ ರಾಜ್ ಕಿಶೋರ್ ಖುಶ್ವಾ ಅವರು ಕಾಂಗ್ರೆಸ್ ಶಾಸಕ ದಿಲೀಪ್ ಚೌಧರಿಗೆ ‘ನಿನ್ನ ನಾಲಿಗೆಯನ್ನು ಕತ್ತರಿಸಿಹಾಕುವುದಾಗಿ ಬೆದರಿಕೆಯೊಡ್ಡಿರುವ ವಿಚಾರ ಮಾಧ್ಯಮಗಳಿಗೆ ದೊರಕಿದೆ.

ಸಚಿವಾಲಯದ ಮುಂಭಾಗದಲ್ಲಿ ಇಬ್ಬರು ಜೆಡಿಯು ಶಾಸಕರು ಮತ್ತು ಕಾಂಗ್ರೆಸ್ ಶಾಸಕರ ನಡುವೆ ಯಾವುದೇ ವಿಷಯದ ಕುರಿತಂತೆ ವಾಗ್ವಾದ ಆರಂಭವಾಗಿ ವಿಕೋಪಕ್ಕೆ ತೆರಳಿತ್ತು ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ವಿಪಕ್ಷಗಳ ಘಟನೆಯನ್ನು ಸದುಪಯೋಗಪಡಿಸಿಕೊಂಡ ಬಿಜೆಪಿ ಸಂಸದ ಗಿರಿರಾಜ್ ಸಿಂಗ್, ಜೆಡಿಯು ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

Write A Comment