ರಾಷ್ಟ್ರೀಯ

ತಲಾಕ್‌ ನಿಷೇಧಿಸಲು ಕೇಂದ್ರ ಸಮಿತಿ ಶಿಫಾರಸು

Pinterest LinkedIn Tumblr

muslim-women-e1459423888227ದೆಹಲಿ: ಮುಸ್ಲಿಂ ಪುರುಷರು ಮೂರು ಬಾರಿಗೆ ಹೇಳುವ ತಲಾಕ್‌ ಅನ್ನು ನಿಷೇಧಿಸುವಂತೆ ಕೇಂದ್ರ ಸರಕಾರ ರೂಪಿಸಿರುವ ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡಿದೆ.

ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮಾಡಿಕೊಂಡಿರುವ ಮನವಿಯ ಪ್ರಕಾರ ಮುಸ್ಲಿಂ ಪುರುಷರು ಒಮ್ಮೆಲೆ ಮೂರು ಬಾರಿಗೆ ಹೇಳುವ ತಲಾಕ್‌ ಅನ್ನು ನಿಷೇಧಿಸುವಂತೆ ಕೇಂದ್ರ ಸರಕಾರ ರೂಪಿಸಿರುವ ಉನ್ನತ ಮಟ್ಟದ ಸಮಿತಿಯು ಶಿಫಾರಸು ಮಾಡಿದೆ.

ಮುಸ್ಲಿಂ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ಮನವಿಗಳಿಗೆ ಸ್ಪಂದಿಸುತ್ತಾ ಸುಪ್ರಿಂ ಕೋರ್ಟ್‌, ಉನ್ನತ ಮಟ್ಟದ ಈ ಸಮಿತಿಯು ಸಿದ್ಧಪಡಿಸಿರುವ ಈ ವರದಿಯನ್ನು ಆರು ವಾರಗಳ ಒಳಗೆ ತನ್ನ ಮುಂದೆ ಇಡುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಭಾರತದಲ್ಲಿನ ಶೇ.90ಕ್ಕೂ ಅಧಿಕ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಕ್‌ ನಿಷೇಧಿಸಬೇಕೆಂದು ಬಯಸುತ್ತಾರೆ ಮತ್ತು ಮುಸ್ಲಿಂ ಪುರುಷರು ಎರಡನೇ ಮದುವೆಯಾಗುವುದನ್ನು ದ್ವೇಷಿಸುತ್ತಾರೆ ಎಂಬ ಸಂಗತಿಯು ಸಮೀಕ್ಷೆಯಿಂದ ತಿಳಿದುಬಂದಿದೆ.

ಮುಸ್ಲಿಂ ಪುರುಷರು ಮಾಡುವ ತ್ರಿವಳಿ ತಲಾಕ್‌ನಿಂದಾಗಿ ಮುಸ್ಲಿಂ ಮಹಿಳೆಯರ ಬದುಕು ಅತ್ಯಂತ ದುರ್ಬಲ ಹಾಗೂ ಶೋಚನೀಯವಾಗುವುದರಿಂದ ಈ ಬಗೆಯ ತಲಾಕ್‌ ಗಳನ್ನು ನಿಷೇಧಿಸುವಂತೆ ಸಮಿತಿಯು ಶಿಫಾರಸು ಮಾಡಿತ್ತು.

14 ಸದಸ್ಯರ ಈ ಉನ್ನತ ಮಟ್ಟದ ಸಮಿತಿಯನ್ನು 2012ರ ಫೆಬ್ರವರಿಯಲ್ಲಿ ಅಂದಿನ ಯುಪಿಎ ಸರಕಾರದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರೂಪಿಸಿತ್ತು ಮತ್ತು 2013ರ ಮೇ ತಿಂಗಳಲ್ಲಿ ಈ ಸಮಿತಿಯನ್ನು ಪುನಾರೂಪಿಸಲಾಗಿತ್ತು.

Write A Comment