ರಾಷ್ಟ್ರೀಯ

ರಾಷ್ಟ್ರಪತಿ ಸ್ಥಾನಕ್ಕೆ ಅಮಿತಾಭ್, ಪ್ರಧಾನಿ ನರೇಂದ್ರ ಮೋದಿ ಪ್ಲಾನ್!

Pinterest LinkedIn Tumblr

amitab-web2ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಾಲಿವುಡ್​ನ ಜನಪ್ರಿಯ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಅವರನ್ನು ಮುಂದಿನ ರಾಷ್ಟ್ರಪತಿಯನ್ನಾಗಿ ಮಾಡಲು ಈಗಾಗಲೇ ಯೋಜಿಸಿದ್ದು, ಮೊದಲ ಹಂತದ ಮಾತುಕತೆ ನಡೆಸಿದ್ದಾರೆ ಎಂದು ಸಮಾಜವಾದಿ ಪಕ್ಷದ ಮಾಜಿ ಮುಖಂಡ ಅಮರ್ ಸಿಂಗ್ ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ಮೋದಿ ಅವರು ಅಮಿತಾಭ್ ಅವರಿಗೆ ಆಪ್ತರಾಗಿದ್ದು, ರಾಷ್ಟ್ರಪತಿ ಸ್ಥಾನದ ಆಫರ್ ನೀಡಿದ್ದಾರೆ. ಇದರ ಜತೆಗೆ ಅಮಿತಾಭ್ ಹಾಗೂ ಅರುಣ್ ಜೇಟ್ಲಿ ಸಹ ಈ ಕುರಿತು ರ್ಚಚಿಸಿದ್ದಾರೆ ಎಂದೂ ಅಮರ್ ಸಿಂಗ್ ವಿವರಿಸಿದ್ದಾರೆ.

ಈ ಹಿಂದೆ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಾನೇ ಸ್ವತಃ ಅಮಿತಾಭ್ ಬಚ್ಚನ್ ಅವರನ್ನುಮೋದಿ ಅವರಿಗೆ ಪರಿಚಯಿಸಿದ್ದೆ. ಭೇಟಿಯ ನಂತರ ಉಭಯರೂ ಆಪ್ತರಾಗಿದ್ದು, ಮೋದಿ ಅವರು ಗುಜರಾತ್ ಪ್ರವಾಸೋದ್ಯಮದ ರಾಯಭಾರತ್ವವನ್ನು ಕೂಡ ಕರುಣಿಸಿದ್ದರು ಎಂದು ಅಮರ್ ಸಿಂಗ್ ತಿಳಿಸಿದ್ದಾರೆ.

Write A Comment