ರಾಷ್ಟ್ರೀಯ

ವಿಮಾನ ದುರಂತದ ಬಳಿಕವೂ ನೇತಾಜಿ ಬೋಸ್ ಬದುಕಿದ್ದರು..!

Pinterest LinkedIn Tumblr

31-Netaji_Bose-files-web

ಹೈದರಾಬಾದ್: ಸ್ವಾತಂತ್ರ್ಯಾನಂತರದ ಕೇಂದ್ರ ಸರ್ಕಾರಗಳು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ಸಂಭವಿಸಿದ ತೈಪೇಯಿ ವಿಮಾನ ದುರಂತದ ಬಳಿಕ ಬದುಕಿದ್ದರು ಎಂಬುದನ್ನು ಖಂಡತುಂಡವಾಗಿ ದೃಢ ಪಡಿಸಲು ನಿರಾಕರಿಸಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಂಗಳವಾರ ಬಿಡುಗಡೆ ಮಾಡಿರುವ ಕಡತದಲ್ಲಿ ನೇತಾಜಿ ಅವರು 1945ರ ಬಳಿಕವೂ ಬದುಕಿದ್ದ ಬಗೆಗೆ ಬೊಟ್ಟು ಮಾಡುವಂತಹ ದಾಖಲೆಗಳು ಬೆಳಕಿಗೆ ಬಂದಿವೆ.

ಒಂದು ಕಡತವಂತೂ ನಿರ್ದಿಷ್ಟವಾಗಿ 1945ರ ಆಗಸ್ಟ್ 18ರ ದಿನಾಂಕ ಅಪಘಾತದ ಬಳಿಕ ನೇತಾಜಿ ಅವರು ಮಾಡಿದ್ದ ಮೂರು ರೇಡಿಯೋ ಪ್ರಸಾರಗಳ ಬಗ್ಗೆ ಪ್ರಸ್ತಾಪಿಸಿದೆ. ನೇತಾಜಿ ಅವರ ಪ್ರಸಾರ ಭಾಷಣಗಳ ವಿವರ ಪ್ರಧಾನ ಮಂತ್ರಿಯವರ ಸಚಿವಾಲಯದ ಕಡತ ಸಂಖ್ಯೆ 870/11/ಪಿ/16/92/ಪಿಒಎಲ್ ಇದರಲ್ಲಿ ಇದೆ. ಈ ಮಾಹಿತಿ ಬಂಗಾಳದ ಗವರ್ನರ್ ಹೌಸ್​ನಿಂದ ಬಂದಿರಬೇಕು ಎಂದು ಊಹಿಸಲಾಗಿದೆ. ಏಕೆಂದರೆ ಇದೇ ಕಡತದಲ್ಲಿ ಬೇರೊಂದು ಕಡೆ ಬಂಗಾಳದಲ್ಲಿನ ಗವರ್ನರ್ ಹೌಸ್​ನ ಅಧಿಕಾರಿ ಪಿಸಿ ಕರ್ ಅವರು 31 ಮೀಟರ್ ಬ್ರಾಂಡ್​ನ ಪ್ರಸಾರದಿಂದ ಸಂಗ್ರಹಿಸಲಾದ ಮಾಹಿತಿಯ ಮೇಲೆ ನಿಗಾ ಇಟ್ಟಿದ್ದರು ಎಂದು ತಿಳಿಸಲಾಗಿದೆ. ಈ ಟಿಪ್ಪಣಿಯನ್ನು ಬಂಗಾಳದ ಆಗಿನ ಗವರ್ನರ್ ಆರ್.ಜಿ ಕೇಸೆ ಅವರಿಗೆ ಸಲ್ಲಿಸಲಾಗಿತ್ತು.

ನೇತಾಜಿ ಅವರ ಮೊದಲ ಪ್ರಸಾರ 1945ರ ಡಿಸೆಂಬರ್ 26ರಂದು ಪ್ರಸಾರಗೊಂಡಿದ್ದು ಅದರಲ್ಲಿ ನೇತಾಜಿ ತಾವು ಮಹಾನ್ ವಿಶ್ವ ಶಕ್ತಿಗಳ ಆಶ್ರಯದಲ್ಲಿ ಇದ್ದು, ತಮ್ಮ ಹೃದಯ ಭಾರತಕ್ಕಾಗಿ ತುಡಿಯುತ್ತಿದೆ. ಮುಂದಿನ 10 ವರ್ಷ ಅಥವಾ ಅದಕ್ಕೂ ಮೊದಲೇ ಸಂಭವಿಸಬಹುದಾದ 3ನೇ ಜಾಗತಿಕ ಸಮರದ ಹೊತ್ತಿಗೆ ತಾವು ಭಾರತಕ್ಕೆ ಬರುವುದಾಗಿಯೂ ತಿಳಿಸಿದ್ದರು. 1946ರ ಜನವರಿ 1ರ ಎರಡನೇ ಪ್ರಸಾರ ಭಾಷಣದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿತ್ವ ಬಿರುಕುಬಿಟ್ಟಿದೆ. ಅದು ಭಾರತಕ್ಕೆ ಸ್ವಾತಂತ್ರ್ಯ ನೀಡಲೇಬೇಕು. ಭಾರತ ಅಹಿಂಸೆಯ ಮಾರ್ಗದಿಂದ ಸ್ವಾತಂತ್ರ್ಯ ಗಳಿಸದು. ಆದರೆ ತಮಗೆ ಮಹಾತ್ಮಾ ಗಾಂಧೀಜಿವರ ಬಗ್ಗೆ ಅಪಾರ ಗೌರವ ಇದೆ ಎಂದು ನೇತಾಜಿ ಹೇಳಿದ್ದರು. 1946ರ ಫೆಬ್ರುವರಿಯಲ್ಲಿ ಪ್ರಸಾರವಾದ ಮೂರನೇ ಬಾನುಲಿ ಭಾಷಣದಲ್ಲಿ ‘ಇದು ಸುಭಾಷ್ ಚಂದ್ರ ಬೋಸ್ ಮಾತನಾಡುತ್ತಿರುವುದು, ಜೈಹಿಂದ್. ಇದು ನಾನು ನನ್ನ ಭಾರತೀಯ ಸಹೋದರ, ಸಹೋದರಿಯರನ್ನು ಉದ್ದೇಶಿಸಿ ಮಾಡುತ್ತಿರುವ ಮೂರನೇ ಪ್ರಸಾರ ಭಾಷಣ. ಜಪಾನ್ ಶರಣಾಗತಿಯ ಬಳಿಕ ನಾನು ಈ ಪ್ರಸಾರ ಭಾಷಣ ಮಾಡುತ್ತಿದ್ದೇನೆ. ಭಾರತದ ರಕ್ತ ಹೀರಲು ಎಲ್ಲಾ ಮಾರ್ಗಗಳನೂ ್ನಳಸಿಕೊಂಡು ಬ್ರಿಟಿಷ್ ಸಾಮ್ರಾಜ್ಯವನ್ನು ಕಾಯಂಗೊಳಿಸುವ ಏಕೈಕ ಉದ್ದೇಶದಿಂದ ಇಂಗ್ಲೆಂಡಿನ ಪ್ರಧಾನಿ ಮಿಸ್ಟರ್ ಪೆಥಿಕ್ ಲಾರೆನ್ಸ್ ಮತ್ತು ಇತರ ಇಬ್ಬರು ಸದಸ್ಯರನ್ನು ಕಳುಹಿಸಲಿದ್ದಾರೆ’ಎಂದು ನೇತಾಜಿ ಹೇಳಿದ್ದರು.

ಪ್ರಧಾನಿ ಸಚಿವಾಲಯ ಬುಧವಾರ 70 ವರ್ಷಗಳಿಂದ ರಹಸ್ಯವಾಗಿದ್ದು 100 ಕಡತಗಳನ್ನು ಬಹಿರಂಗಪಡಿಸಿದೆ.

Write A Comment