ರಾಷ್ಟ್ರೀಯ

Shocking : ಹೇಗಿದ್ದ ಇಂದ್ರಾಣಿ ಮುಖರ್ಜಿ ಹೇಗಾಗಿದ್ದಾಳೆ ನೋಡಿ!

Pinterest LinkedIn Tumblr

Indrani-now-600ಹೊಸದಿಲ್ಲಿ : ಶೀನಾ ಬೋರಾ ಕೊಲೆ ಕೇಸ್‌ನಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಪಾಲಾಗಿರುವ ಇಂದ್ರಾಣಿ ಮುಖರ್ಜಿಯ ತಾಜಾ ಫೋಟೊ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. ಈ ಚಿತ್ರವನ್ನು ನೋಡಿದಾಗ ಹಿಂದೆ ಹೇಗಿದ್ದವಳು ಈಗ ಹೇಗಾಗಿ ಬಿಟ್ಟಿದ್ದಾಳೆ ಎಂದು ಎಲ್ಲರೂ ಅಚ್ಚರಿಪಟ್ಟು ಹುಬ್ಬೇರಿಸುವಂತಾಗಿದೆ.

ಶೀನಾ ಬೋರಾ ಮರ್ಡರ್‌ ಕೇಸ್‌ನಲ್ಲಿ ಪೊಲೀಸರಿಂದ ಬಂಧನಕ್ಕೆ ಗುರಿಯಾಗಿದ್ದ ಸಂದರ್ಭದಲ್ಲಿ ಇಂದ್ರಾಣಿ ಮುಖರ್ಜಿ, ಸಿನೇಮಾ ನಟಿಯಂತೆ ಅತ್ಯಾಕರ್ಷಕ ರೂಪ ಲಾವಣ್ಯ ಹೊಂದಿದ್ದಳು. ಈಗ ದೊರಕಿರುವ ಆಕೆಯ ತಾಜಾ ಫೋಟೋ ಕಂಡಾಗ ನಿಸ್ತೇಜ ಮುಖದ, ಹಣ್ಣು ಹಣ್ಣು ಮುದುಕಿಯಂತೆ ಇಂದ್ರಾಣಿ ಕಾಣಿಸುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಮಾಧ್ಯಮದಲ್ಲಿ ಪುಂಖಾನುಪುಂಖವಾಗಿ ಹರಿದು ಬಂದಿರುವ ತನ್ನ ಕುರಿತ ಕಥಾನಕಗಳಿಂದ ಕಂಗೆಟ್ಟಿರುವ ಇಂದ್ರಾಣಿ ತನ್ನೆಲ್ಲ ತೇಜಸ್ಸು, ಆಕರ್ಷಣೆ, ಯೌವನವನ್ನು ಕಳೆದುಕೊಂಡವಳಂತೆ ಕಾಣುತ್ತಾಳೆ.

ಶೀನಾ ಬೋರಾ ಕೊಲೆ ಕೇಸಿನಲ್ಲಿ ಅರೆಸ್ಟ್‌ ಆಗಿರುವ ಇಂದ್ರಾಣಿಯ ಪತಿ, ಮಾಧ್ಯಮ ದೊರೆ ಪೀಟರ್‌ ಮುಖರ್ಜಿ, ಕೋರ್ಟಿನಲ್ಲಿ ಮಾಡಿಕೊಂಡಿದ್ದ ಮನವಿಯೊಂದರಲ್ಲಿ ಹೀಗೆ ಹೇಳಿದ್ದರು : “ಇಂದ್ರಾಣಿ ಮುಖರ್ಜಿ ಅತ್ಯಂತ ಮಹತ್ವಾಕಾಂಕ್ಷೆಯ ಮಹಿಳೆ; ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಆಕೆ ತನ್ನ ಮಕ್ಕಳ ಸಹಿತ ಏನನ್ನು ಬೇಕಾದರೂ ತ್ಯಾಗ ಮಾಡಲು ಆಕೆ ಸಿದ್ಧಳಿದ್ದಾಳೆ; ಆಕೆ ಸ್ವಭಾವತಃ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಿಸುವ ಮನೋಭಾವದವಳು; ಆಕೆಗೆ ತನ್ನ ಕೈಕೆಳಗಿನ ನೌಕಕರ ಮೇಲೆ ಮತ್ತು ತನ್ನ ಬಳಿ ಕೆಲಸ ಮಾಡಿಕೊಂಡಿರುವ ಯಾರ ಮೇಲಾದರೂ ಬಲವಾದ ಹಿಡಿತ ಇರುತ್ತಿತ್ತು’.

ಶೀನಾ ಬೋರಾ ಮರ್ಡರ್‌ ಕೇಸಿನಲ್ಲಿ ಆಪಾದಿತರಾಗಿರುವ ಇಂದ್ರಾಣಿ ಮಾಜಿ ಪತಿ ಸಂಜೀವ್‌ ಖನ್ನಾ ಮತ್ತು ಆಕೆಯ ಕಾರು ಚಾಲಕ ಶ್ಯಾಮವರ ರಾಯ್‌ ಪ್ರಕೃತ ಆರ್ಥರ್‌ ರೋಡ್‌ ಜೈಲಿನಲ್ಲಿದ್ದಾರೆ. ಈ ಮೂವರು ಕೂಡಿ ಇಂದ್ರಾಣಿಯ ಪುತ್ರಿ, 24ರ ಹರೆಯದ ಶೀನಾ ಬೋರಾಳನ್ನು 2012ರ ಎಪ್ರಿಲ್‌ನಲ್ಲಿ ಕಾರಿನಲ್ಲಿ ಕೊಲೆಗೈದಿದ್ದರು. ಕಳೆದ ವರ್ಷ ಆಗಸ್ಟ್‌ನಲ್ಲಷ್ಟೇ ಈ ಕೊಲೆ ಕೃತ್ಯ ಬಯಲಾಗಿತ್ತು.
-ಉದಯವಾಣಿ

Write A Comment