ರಾಷ್ಟ್ರೀಯ

‘ಭಾರತ್ ಮಾತಾಕಿ ಜೈ’ ಹೇಳದವರು ದೇಶ ಬಿಡಲಿ– ಬಿಜೆಪಿ

Pinterest LinkedIn Tumblr

Kailash-Vijayvargiyaಕೋಲ್ಕತ್ತ (ಪಿಟಿಐ): ‘ಭಾರತ್ ಮಾತಾಕಿ ಜೈ’ ಹೇಳಲು ಬಯಸದವರಿಗೆ ಭಾರತದಲ್ಲಿ ಇರುವ ಹಕ್ಕಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಸ್ ವಿಜಯವರ್ಗೀಯಾ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.
‘ಭಾರತ್ ಮಾತಾಕಿ ಜೈ’ ಘೋಷನೆ ಕೂಗುವುದಿಲ್ಲ ಎಂದಿದ್ದ ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಹೇಳಿಕೆಗೆ ಬಿಜೆಪಿ ಮುಖಂಡ ಹೀಗೆ ಪ್ರತಿಕ್ರಿಯಿಸಿದ್ದಾರೆ.
‘ಭಾರತ್ ಮಾತಾಕೀ ಜೈ ಎನ್ನದವರಿಗೆ ಭಾರತದಲ್ಲಿ ವಾಸಿಸುವ ಹಕ್ಕಿಲ್ಲ. ಅವರು ಬೇರೆ ರಾಷ್ಟ್ರಗಳಿಗೆ ಹೋಗಬೇಕು’ ಎಂದು ವಿಜಯವರ್ಗೀಯಾ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಈ ಘೋಷಣೆ ಮೂಲಕ ರಾಷ್ಟ್ರಭಕ್ತಿ ಪ್ರೇರಿಪಿಸಲು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ್ದ ಸಲಹೆ ತಿರಸ್ಕರಿಸಿದ್ದ ಓವೈಸಿ, ಈ ಸವಾಲು ಹಾಕಿದ್ದರು.

Write A Comment