ಮನೋರಂಜನೆ

ನಟ ಶಾರುಖ್ ಮಾವ ರಮೇಶ್‌ ಚಂದ್ರ ನಿಧನ

Pinterest LinkedIn Tumblr

srk

ನವದೆಹಲಿ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರು ತಂದೆ ರಮೇಶ್ ಚಂದ್ರ ಚಿಬ್ಬರ್ ಅವರು ಮಂಗಳವಾರ ರಾತ್ರಿ ನಿಧನರಾಗಿರುವುದಾಗಿ ತಿಳಿದುಬಂದಿದೆ.

ಕೆಲವು ದಿನಗಳ ಹಿಂದಷ್ಟೇ ಅನಾರೋಗ್ಯ ಪೀಡಿತರಾಗಿದ್ದ ಶಾರುಖ್ ಮಾವ ರಮೇಸ್ ಚಂದ್ರ ಅವರು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಆದರೆ, ನಿನ್ನೆ ರಾತ್ರಿ ತೀವ್ರ ಅನಾರೋಗ್ಯ ಉಂಟಾದ ಕಾರಣ ರಾತ್ರಿ. 8.55ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.

ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಶಾರುಖ್ ಹಾಗೂ ಗೌರಿ ಖಾನ್ ಅವರು ಕಂಬನಿ ಮಿಡಿದಿದ್ದು, ತಂದೆ ಯನ್ನು ನೋಡಲು ಗೌರಿ ಖಾನ್ ಅವರು ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಇದರಂತೆ ಪತ್ನಿಗೆ ಸಾಥ್ ನೀಡಿರುವ ಶಾರುಖ್ ಅವರು ಕೂಡ ಚಿತ್ರೀಕರಣವನ್ನು ಬಿಟ್ಟು ಗೌರಿ ಖಾನ್ ಜೊತೆ ಹೋಗಿದ್ದಾರೆ. ಶಾರುಖ್ ಅವರು ರಯೀಸ್ ಚಿತ್ರದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದರು. ಇದೀಗ ತಮ್ಮ ಮಾವನ ನಿಧನ ವಾರ್ತೆಯಿಂದಾಗಿ ಚಿತ್ರೀಕರಣವನ್ನು ಅರ್ಧದಲ್ಲೇ ಬಿಟ್ಟಿದ್ದು, ಚಿತ್ರೀಕರಣವನ್ನು ಕೆಲವು ದಿನಗಳ ಕಾಲ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.

ರಮೇಶ್ ಚಂದ್ರ ದೆಹಲಿಯ ಎಸ್ಕಾರ್ಟ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬುಧವಾರ ಬೆಳಗ್ಗೆ ಅಂತ್ಯಕ್ರಿಯೆ ನೆರವೇರಲಿದೆ. ಶಾರೂಖ್ ಮತ್ತವರ ಪತ್ನಿ ರಮೇಶ್ ಚಂದ್ರ ಅವರ ಅಂತಿಮ ದರ್ಶನ ಪಡೆದಿದ್ದಾರೆ.

Write A Comment