ರಾಷ್ಟ್ರೀಯ

ಕಪ್ಪು ಹಣವುಳ್ಳವರು ಘೋಷಿಸಿಕೊಳ್ಳಲು ಅವಕಾಶ ನೀಡಿದೇವೆ, ಆದರೆ ಇದು ಕ್ಷಮಾದಾನವಲ್ಲ: ಜೇಟ್ಲಿ

Pinterest LinkedIn Tumblr

jetlyನವದೆಹಲಿ, ಮಾ.2- ಕಪ್ಪು ಹಣ ಹೊಂದಿರುವವರಿಗೆ ಅದನ್ನು ಘೋಷಿಸಿಕೊಳ್ಳಲು ಅವಕಾಶ ನೀಡಿದ್ದೇವೆ. ಆದರೆ ಅದು ಕ್ಷಮಾದಾನವಲ್ಲ. ನಿಗದಿತಗಿಂತ ಹೆಚ್ಚಿನ ಪ್ರಮಾಣದಲ್ಲಿ ದಂಡ ವಸೂಲಿ ಮಾಡಲಾಗುತ್ತಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಇಂದಿಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ನೆಲೆಸಿ ವಿದೇಶದಲ್ಲಿ ಅಕ್ರಮವಾಗಿ ಹಣ ಇಟ್ಟಿರುವವರು ಸ್ವಯಂಪ್ರೇರಿತರಾಗಿ ಘೋಷಣೆ ಮಾಡಿಕೊಂಡು ಸ್ವಚ್ಛರಾಗಬೇಕೆಂಬ ಸರ್ಕಾರದ ಆಶಯವಾಗಿದೆ. ಆದರೆ ಅವರಿಗೆ ಕ್ಷಮಾದಾನ ಏನು ನೀಡುತ್ತಿಲ್ಲ. ಸಾಮಾನ್ಯ ವಿಧದಲ್ಲಿ ಶೇ.30ರಷ್ಟು ದಂಡ ಕಟ್ಟಿಸಿಕೊಳ್ಳಲಾಗುತ್ತದೆ. ಆದರೆ ಕಪ್ಪು ಹಣದಲ್ಲಿ ಶೇ.45ರಷ್ಟು ತೆರಿಗೆ ವಸೂಲಿ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕೈಗಾರಿಕಾ ಮಂಡಳಿ ವತಿಯಿಂದ ಇಂದಿಲ್ಲಿ ನಡೆದ ಬಜೆಟ್ ನಂತರದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಜೂ.1ರಿಂದ 4 ತಿಂಗಳ ಕಾಲ ಕಂಪ್ಲೆನ್ಸಿ ವಿಂಡೋವನ್ನು ತೆರೆಯಲಾಗಿತ್ತು. ಅದರಲ್ಲಿ ಅಬಕಾರಿ ಸುಂಕ, ತೆರಿಗೆ ಮತ್ತಿತರ ನಿಯಮಗಳನ್ನು ಉಲ್ಲಂಘಿಸಿ ಇಟ್ಟುಕೊಂಡಿದ್ದ ಸಂಪತ್ತನ್ನು ಘೋಷಿಸಿಕೊಳ್ಳುವಂತೆ ಅವಕಾಶ ನೀಡಿದ್ದೆವು. ಕೆಲವರು ಶೇ.50ರಷ್ಟು ದಂಡವನ್ನು ಕಟ್ಟಿದ್ದಾರೆ. ವಿಶೇಷವೆಂದರೆ ತಾವು ಹೊಂದಿದ್ದ ಸಂಪತ್ತಿನ ಈಗಿನ ದರಕ್ಕೆ ಅನುಗುಣವಾಗಿ ಇದನ್ನು ವಸೂಲು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 90 ದಿನಗಳಲ್ಲಿ ವಿದೇಶ ಬ್ಯಾಂಕ್‌ಗಳಲ್ಲಿ ಹಣ ಹೂಡಿಕೆ ಮಾಡಿದ್ದ ಸಂಬಂಧ 4,147 ಕೋಟಿ ರೂ.ಗಳನ್ನು ಘೋಷಣೆ ಮಾಡಲಾಗಿತ್ತು.

Write A Comment