ರಾಷ್ಟ್ರೀಯ

‘ಸ್ಟ್ಯಾಂಡ್‌ ಅಪ್ ಇಂಡಿಯಾ’ಗೆ ₹ 500 ಕೋಟಿ

Pinterest LinkedIn Tumblr

sandsandfiನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ‘ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆ’ಗೆ ₹500 ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳಾ ಉದ್ಯಮಿಗಳಿಗೆ ಬ್ಯಾಂಕುಗಳ ಮೂಲಕ ಹಣಕಾಸಿನ ನೆರವು ಒದಗಿಸಲಾಗುವುದು. ಪ್ರತಿ ಬ್ಯಾಂಕ್‌ ಖಾತೆಯಲ್ಲಿ ಎರಡು ಯೋಜನೆಗಳಿಗೆ ಸಾಲ ನೀಡಲಾಗುವುದು ಎಂದು ಅರುಣ್‌ ಜೇಟ್ಲಿ ಹೇಳಿದರು.

ಪ್ರತಿ ಕುಟುಂಬಕ್ಕೆ 1 ಲಕ್ಷದವರೆಗೆ ಆರೋಗ್ಯ ಮಿಮೆ ಒದಗಿಸಲಾಗುವುದು, ಪ್ರಧಾನಿ ಜನ ಔಷಧಿ ಯೋಜನೆಯಡಿ 300ಕ್ಕೂ ಹೆಚ್ಚು ಜೀವರಕ್ಷಕ ಔಷಧ ಅಂಗಡಿಗಳನ್ನು ತೆರೆಯಲಾಗುವುದು, ಗ್ರಾಮೀಣ ಪ್ರದೇಶಗಳಲ್ಲಿ ‘ಡಿಜಿಟಲ್‌ ಸಾಕ್ಷರತೆ’ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ತೆರಿಗೆ ವಂಚನೆ ತಡೆಯಲು, ಮತ್ತು ತೆರಿಗೆ ಸಂಬಂಧಿತ ಪ್ರಕರಣಗಳ ತನಿಖೆಗೆ ‘ಹಣಕಾಸು ದತ್ತಾಂಶ ನಿರ್ವಹಣೆ ಕೇಂದ್ರ’ ಸ್ಥಾಪಿಸಲಾಗಿದೆ. ‘ಷೇರು ವಿಕ್ರಯ’ ಇಲಾಖೆಯ ಹೆಸರನ್ನು ‘ಹೂಡಿಕೆ ಮತ್ತು ಸಾರ್ವಜನಿಕ ಸಂಪತ್ತು ನಿರ್ವಹಣೆ’ ಸಂಸ್ಥೆ ಎಂದು ಬದಲಿಸಲಾಗಿದೆ ಎಂದು ಅವರು ಹೇಳಿದರು.

ರಸ್ತೆ ಮತ್ತು ಹೆದ್ದಾರಿ ಅಭಿವೃದ್ಧಿಗೆ 55 ಸಾವಿರ ಕೋಟಿ ಮೀಸಲಿಡಲಾಗಿದೆ. ಭಾರತದಲ್ಲಿ ತಯಾರಿಸುವ ಆಹಾರ ಉತ್ಪನ್ನಗಳ ಮಾರಾಟ ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಲಾಗಿದೆ ಎಂದರು.

Write A Comment