ರಾಷ್ಟ್ರೀಯ

ಹಠಾತ್ ಸಿಟ್ಟಿಗೆದ್ದ ಸಾಕಾನೆ, ಸೊಂಡಿಲ ದಾಳಿ, 27 ವಾಹನಗಳಿಗೆ ಹಾನಿ

Pinterest LinkedIn Tumblr

elepentಪಾಲಕ್ಕಾಡ್ ( ಕೇರಳ): ಹಠಾತ್ತನೆ ಆಕ್ರೋಶಗೊಂಡ ಸಾಕಿದ ಆನೆಯೊಂದು ಮಾವುತ ಬೆನ್ನ ಮೇಲಿದ್ದಾಗಲೇ, ನಗರದ ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ನಿಲ್ಲಿಸಿದ್ದ ವಾಹನಗಳ ಮೇಲೆ ದಾಳಿ ನಡೆಸಿ, 27 ವಾಹನಗಳನ್ನು ಹಾನಿಪಡಿಸಿದ ಘಟನೆ ಘಟಿಸಿದೆ.

ಆನೆಯ ಮೇಲೆ ಮಾವುತ ಇರುವಾಗಲೇ ತನ್ನ ತಾಳ್ಮೆ ಕಳೆದುಕೊಂಡ ಆನೆ ಬೈಕ್, ಆಟೋ ರಿಕ್ಷಾಗಳನ್ನು ತನ್ನ ‘ಸೊಂಡಿಲ ದಾಳಿ’ ನಡೆಸಿ ಸಂಪೂರ್ಣ ಛದ್ರಗೊಳಿಸಿತು.

ಈ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಸಾವುನೋವು ಸಂಭವಿಸಿಲ್ಲ. ಮಾವುತ ಆನೆಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. ಆನೆ ಒಮ್ಮೆಲೇ ಈ ರೀತಿ ಉಗ್ರ ರೂಪ ತಾಳಲು ಕಾರಣ ಏನೆಂದು ತಿಳಿಂದು ಬಂದಿಲ್ಲ.

Write A Comment