ರಾಷ್ಟ್ರೀಯ

ಮಾಜಿ ರಾಜ್ಯಪಾಲ ಬಂಧನ..!

Pinterest LinkedIn Tumblr

arrestನವದೆಹಲಿ, ಫೆ.28- ತಾನು ಮಾಜಿ ರಾಜ್ಯಪಾಲ ಎಂದು ಜನರನ್ನು ನಂಬಿಸಿ, ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ನಾನು ಮಾಜಿ ಗವರ್ನರ್, ನಿಮಗೆ ಉದ್ಯೋಗ ಕೊಡಿಸುತ್ತೇನೆ ಎಂದು ಭರವಸೆ ನೀಡಿ ಹಣ ಕೇಳ್ತುದ್ದ ಅಲಿಗಢ ನಿವಾಸಿ 49 ವರ್ಷದ ಸಯ್ಯದ್ ಮೊಹಮ್ಮದ್ ಅಲಿ ರಿಜ್ವಿ ಈಗ ಪೊಲೀಸ್ ಅತಿಥಿಯಾಗಿದ್ದಾನೆ.

ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಯಾರೋ ಒಬ್ಬ ವ್ಯಕ್ತಿ ಜನರಿಗೆ ಮೋಸ ಮಾಡುತ್ತಿರುವ ಬಗ್ಗೆ ಗುಮಾನಿ ಇದೆ ಎಂದು ಜಾರ್ಖಂಡ್, ಒರಿಸ್ಸಾ ಮತ್ತು ಅಸ್ಸೋಂ ಮಾಜಿ ರಾಜ್ಯಪಾಲ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾಗಿರುವ ಸಯ್ಯದ್ ಸಿಬ್‌ಟಿ ರಜಿ ಅವರು ನೀಡಿದ ದೂರಿನ ಮೇಲೆ ಕಾರ್ಯ ಪ್ರವೃತ್ತರಾದ ದೆಹಲಿ ಪೊಲೀಸರು ಈ ನಕಲಿ ಮಾಜಿ ರಾಜ್ಯುಪಾಲನನ್ನು ಬಂಧಿಸಿದ್ದಾರೆ.

ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆಯಲು ಈ ನಕಲಿ ರಾಜ್ಯಪಾಲ ಬಳಸುತ್ತಿದ್ದ ಮೊಬೈಲ್ ಸಂಖ್ಯೆಗಳು ಹಾಗೂ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ಸಯ್ಯದ್ ಮೊಹಮ್ಮದ್ ಅಲಿ ರಿಜ್ವಿ ಸಿಕ್ಕಿ ಬಿದ್ದಿದ್ದಾನೆ. ತಾನು ಈ ಅಪರಾಧ ಎಸಗಿರುವುದಾಗಿ ಬಂಧಿತ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ದೆಹಲಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವೀಂದರ್ ಯಾದವ್ ತಿಳಿಸಿದ್ದಾರೆ.

Write A Comment