ಅಂತರಾಷ್ಟ್ರೀಯ

ವಿರಾಟ್ ಕೊಹ್ಲಿಯ ಪಾಕಿಸ್ತಾನಿ ಅಭಿಮಾನಿಗೆ ಜಾಮೀನು ಮಂಜೂರು; ಪಾಕ್ ನೆಲದಲ್ಲಿ ಭಾರತದ ತ್ರಿವರ್ಣ ದ್ವಜ ಹಾರಿಸಿ ಬಂಧನಕ್ಕೊಳಗಾಗಿದ್ದ ಅಭಿಮಾನಿ

Pinterest LinkedIn Tumblr

Virat-Kohlis-fan

ಇಸ್ಲಾಮಾಬಾದ್: ಪಾಕ್ ನೆಲದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಟ್ಟಾ ಅಭಿಮಾನಿ ಉಮರ್ ದ್ರಾಜ್ ಗೆ ಜಾಮೀನು ದೊರೆತಿದೆ.

ಪಂಜಾಬ್ ಪ್ರಾಂತ್ಯದ ನ್ಯಾಯಾಲಯ ಉಮರ್ ದ್ರಾಜ್ ಗೆ ಜಾಮೀನು ಮಂಜೂರು ಮಾಡಿರುವ ಬಗ್ಗೆ ಪಾಕ್ ಪತ್ರಿಕೆ ಡಾನ್ ವರಿ ಪ್ರಕಟಿಸಿದೆ. 50 ,000 ರೂ ಮೌಲ್ಯದ ಬಾಂಡ್ ನೀಡಿ ಜಾಮೀನು ಪಡೆದುಕೊಳ್ಳುವಂತೆ ಉಮರ್ ದ್ರಾಜ್ ಗೆ ಕೋರ್ಟ್ ಸೂಚನೆ ನೀಡಿದೆ.

ಫೆ.18 ರಂದು ನಡೆದಿದ್ದ ವಿಚಾರಣೆಯಲ್ಲಿ ಅನೀಕ್ ಅನ್ವರ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು ನಂತರ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಅಸಾದುಲ್ಲಾ ಸಿರಾಜ್ ಉಮರ್ ದ್ರಾಜ್ ನ ಜಾಮೀನು ಅರ್ಜಿ ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿದ್ದಾರೆ. ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯಾಗಿರುವ ಉಮರ್ ದ್ರಾಜ್ ತನ್ನ ಮನೆಯಲ್ಲಿ ಭಾರತದ ಧ್ವಜ ಹಾರಿಸಿದ್ದಕ್ಕಾಗಿ ಜ.25 ರಂದು ಬಂಧನಕ್ಕೊಳಗಾಗಿದ್ದ.

Write A Comment