ನವದೆಹಲಿ: ಸರ್ಕಾರ ಜೆಎನ್ಯುು ವಿವಾದದ ಬಗ್ಗೆ ಚರ್ಚೆಗೆ ಸಿದ್ಧವಿದೆ. ಅದರ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ, ಅವುಗಳ ಬಗ್ಗೆ ಚರ್ಚೆ ನಡೆಯಬೇಕಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಸೋಮವಾರ ಸರ್ವ ಪಕ್ಷ ಸಭೆಗೆ ತಿಳಿಸಿದ್ದಾರೆ.
ತಮಿಳುನಾಡು ನಾಯಕರು ಡಿ. ರಾಜಾ ಬಗ್ಗೆ ಮಾಡಿರುವ ಹೇಳಿಕೆಯನ್ನು ಬಿಜೆಪಿ ಅನುಮೋದಿಸುವುದಿಲ್ಲ ಎಂದು ನಾಯ್ಡು ಹೇಳಿದರು.
ಸಾಮಾನ್ಯ ಸಹಮತ ಉಳ್ಳ ಮಸೂದೆಗಳನ್ನು ಮಾತ್ರವೇ ಅಂಗೀಕರಿಸಲಾಗುವುದು. ಜಿಎಸ್ಟಿ ಮತ್ತು ಇತರ ವಿವಾದಾತ್ಮಕ ಮಸೂದೆಗಳನ್ನು ಸಂಸತ್ ಅಧಿವೇಶನದ ಪೂರ್ವಾರ್ಧದಲ್ಲಿ ಕೈಗೆತ್ತಿಕೊಳ್ಳಬಾರದು ಎಂದು ಕಾಂಗ್ರೆಸ್ ಸರ್ವ ಪಕ್ಷ ಸಭೆಯಲ್ಲಿ ಆಗ್ರಹಿಸಿದೆ.
ಆದರೆ, ಸಂಸತ್ ಕಾರ್ಯ ನಿರ್ವಹಿಸಬೇಕು ಎಂಬ ಆಸಕ್ತಿ ಸರ್ಕಾರಕ್ಕೆ ಇರುವ ಬಗ್ಗೆ ನಮಗೆ ಶಂಕೆ ಇದೆ. ಸಂಸತ್ ಕಲಾಪಕ್ಕೆ ಭಂಗ ಉಂಟಾಗುವಂತಹ ಕಾರ್ಯಸೂಚಿಯನ್ನು ಅದು ಸಿದ್ಧ ಪಡಿಸುತ್ತಿದೆ ಎಂದು ಸರ್ವ ಪಕ್ಷ ಸಭೆಯ ಬಳಿಕ ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಹೇಳಿದ್ದಾರೆ.