ಅಂತರಾಷ್ಟ್ರೀಯ

ಟೆಕ್ಕಿ ಪ್ರತಿಭಾ ನಿಗೂಢ ಕೊಲೆ ಭಾರತ ವ್ಯಕ್ತಿಯದೇ ಕೈವಾಡ: ಪೊಲೀಸರು

Pinterest LinkedIn Tumblr

pಮೆಲ್ಬೋರ್ನ್, ಫೆ.೨೨-ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಭಾರತ ಮೂಲದ ಮಹಿಳಾ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರನ್ನು ನಿಗೂಢ ರೀತಿಯಲ್ಲಿ ಹತ್ಯೆ ಮಾಡಿದ್ದರ ಹಿಂದಿನ ರಹಸ್ಯವನ್ನು ಭೇದಿಸಿರುವ ಪೊಲೀಸರು ಭಾರತದಲ್ಲೇ ಇರುವ ವ್ಯಕ್ತಿಯೊಬ್ಬರು ಇದರ ಹಿಂದಿದ್ದಾರೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಮೈಂಡ್ ಟ್ರೀ ಕಂಪೆನಿಯಿಂದ ಮೂರು ವರ್ಷಗಳ ಡೆಪ್ಯೂಟೇಷನ್ ಮೇಲೆ ಇಲ್ಲಿಗೆ ಬಂದಿದ್ದ ೪೧ ವರ್ಷದ ಪ್ರತಿಭಾ ಅರುಣ್‌ಕುಮಾರ್ ಅವರು ಮಾರ್ಚ್‌ನಲ್ಲಿ ಸಿಡ್ನಿಯಲ್ಲಿನ ಕಚೇರಿಯಿಂದ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ದಾಳಿ ಮಾಡಿ ಹತ್ಯೆ ಮಾಡಿದ್ದ.

ಅತ್ಯಂತ ನಿಗೂಢವಾಗಿದ್ದ ಈ ಹತ್ಯೆ ಪ್ರಕರಣದ ಬೆನ್ನು ಬಿದ್ದ ಪೊಲೀಸರು, ಸುಮಾರು ೨ ಸಾವಿರಕ್ಕಿಂತ ಹೆಚ್ಚು ಜನರ ವಿಚಾರಣೆ ನಡೆಸಿ ೨೫೦ ಹೇಳಿಕೆಗಳನ್ನು ದಾಖಲಿಸಿದ್ದರು. ಮಾ.೭ರಂದು ಸಂಜೆ ಮನೆಗೆ ಬರುತ್ತಿದ್ದ ಒಂದು ಮಗುವಿನ ತಾಯಿ ಪ್ರತಿಭಾರನ್ನು ಹಿಂಬಾಲಿಸಿ ಅವರು ಟ್ರೈನ್‌ನಿಂದ ಕೆಳಗಿಳಿಯುತ್ತಿದ್ದಂತೆ ಆ ವ್ಯಕ್ತಿ ಕೊಲೆ ಮಾಡಿದ್ದ. ತನಿಖೆ ಮುಂದುವರಿದಂತೆ ಆಕೆಯ ಪತಿ ಕುಮಾರ್‌ಗೆ ಪರಿಚಯವಿದ್ದ ಭಾರತದ ವ್ಯಕ್ತಿಯೇ ಈ ಕೊಲೆ ಮಾಡಿದ್ದಾನೆ ಎಂಬ ತೀರ್ಮಾನ ಪೊಲೀಸರದಾಗಿದೆ. ಒಟ್ಟಾರೆ ಒಂದು ಸಾವಿರ ಕಿ.ಮೀ. ದೂರದ ಭಾರತದಲ್ಲಿನ ವ್ಯಕ್ತಿಯೇ ಈ ನಿಗೂಢ ಕೊಲೆಯ ಸೂತ್ರಧಾರ ಎಂದು ಪೊಲೀಸರು ಹೇಳಿದ್ದಾರೆ.

Write A Comment