ರಾಷ್ಟ್ರೀಯ

ಟೈಸನ್‌ ಹಾಡಿಗೆ ಸಾರಾಗೋವಿಂದು ಮೆಚ್ಚುಗೆ

Pinterest LinkedIn Tumblr

Tyson-(14)“ಟೈಸನ್‌’ ಚಿತ್ರದ ನಿರ್ಮಾಪಕರು ಹೋಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಸಾ.ರಾ. ಗೋವಿಂದು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಬೇಕು ಎಂದು ಕೇಳಿದರಂತೆ. ಅದಕ್ಕೆ ಗೋವಿಂದು ಅವರಿಗೆ ಇಲ್ಲ ಎನ್ನಲು ಮನಸ್ಸಾಗಲಿಲ್ಲವಂತೆ. ಕಾರಣ ಚಿತ್ರದ ನಾಯಕ ವಿನೋದ್‌, ಟೈಗರ್‌ ಪ್ರಭಾಕರ್‌ ಅವರ ಮಗ ಎಂಬ ಸೆಂಟಿಮೆಂಟ್‌. “ವಿನೋದ್‌ನ ಚಿಕ್ಕ ಹುಡುಗನ್ನಾಗಿದ್ದಾಗಿನಿಂದ ನೋಡ್ತಿದ್ದೀನಿ. ಏಕೆಂದರೆ, ಪ್ರಭಾಕರ್‌ ಆಗ ಡಾ. ರಾಜಕುಮಾರ್‌ ಅವರ ಚಿತ್ರಗಳಲ್ಲಿ ನಟಿಸುತ್ತಿದ್ದರು. ನಾನು ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿದ್ದೆ. ಫ್ರೆàಜರ್‌ ಟೌನ್‌ನಲ್ಲಿ ಪ್ರಭಾಕರ್‌ ಅವರ ಮನೆ ಇತ್ತು.
ಅವರನ್ನು ಚಿತ್ರೀಕರಣಕ್ಕೆ ಕರೆತರೋಕೆ ಹೋಗುತ್ತಿದ್ದೆ. ಬೆಳಿಗ್ಗೆ ಏಳೂವರೆಗೆ ಅವರ ಮೆನಗೆ ಹೋಗಿ ರೇಡಿನಾ ಅಂದರೆ, ಬಾಪ್ಪಾ ರಾಜ ಚಿಕನ್‌ ತಿನ್ನು ಅನ್ನೋರು. ವಿನೋದ್‌ ಅಕ್ಕನಿಗೆ ಪ್ರಭಾಕರ್‌ ತರಹವೇ ತಲೆಗೂದಲು’ ಎಂದು ನೆನಪಿಸಿಕೊಂಡರು ಗೋವಿಂದು. ಅವರ ಘರ್ಜನೆ ಇನ್ನಾéರಿಗೂ ಬರುವುದಿಲ್ಲ ಎಂದ ಗೋವಿಂದು ಅವರು, ಈ ಚಿತ್ರ ಗೆಲ್ಲಲಿ ಎಂದು ಹಾರೈಸಿದರು.

ಮಾತಾಡುವುದಕ್ಕಿಂತ ಮುನ್ನ, ಚಿತ್ರತಂಡಕ್ಕೆ ಹಾರೈಸುವುದಕ್ಕಿಂತ ಮುನ್ನ ಗೋವಿಂದು ಅವರು “ಟೈಸನ್‌’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದರು. ಚಿತ್ರದ ಟ್ರೇಲರ್‌ ನೋಡಿದ್ದರು. ಅವರಿನ್ನೂ ಒಂದಿಷ್ಟು ಹೊತ್ತು ಇದ್ದು, ಬೇರೆಯವರ ಮಾತು ಕೇಳಿಸಿಕೊಳ್ಳುತ್ತಿದ್ದರೋ ಏನೋ? ಆದರೆ, ಬೇರೆ ಒಂದು ಸಮಾರಂಭಕ್ಕೆ ಹೋಗಬೇಕಿದ್ದರಿಂದ, ಗೋವಿಂದು ಹೊರಟರು. ಅವರು ಹೊರಡುತ್ತಿದ್ದಂತೆಯೇ ವೇದಿಕೆಯಲ್ಲಿದ್ದ ಒಬ್ಬೊಬ್ಬರೇ ಗಣ್ಯರು ಮತ್ತು ಚಿತ್ರತಂದವರು ಮಾತಾಡುತ್ತಾ ಹೋದರು. ಮುಖ್ಯ ಅತಿಥಿಗಳಾಗಿ ಬಂದಿದ್ದ ಇಂದ್ರಜಿತ್‌ ಲಂಕೇಶ್‌ ಮತ್ತು ಶೈಲಜಾ ನಾಗ್‌ ಅವರು ಚಿತ್ರತಂಡಕ್ಕೆ ಮತ್ತು ವಿಶೇಷವಾಗಿ ವಿನೋದ್‌ ಪ್ರಭಾಕರ್‌ ಗೆಲ್ಲಲಿ ಎಂದು ಹಾರೈಸಿದರು. ಇನ್ನು ಚಿತ್ರತಂಡದರ ಸರದಿ.
ನಿರ್ದೇಶಕ ರಾಮ್‌ನಾರಾಯಣ್‌, ಸಂಗೀತ ನಿರ್ದೇಶಕರಾಗಿ ಗಣೇಶ್‌ ನಾರಾಯಣ್‌ ಮತ್ತು ಜೆಸ್ಸಿ ಗಿಫ್ಟ್, ಕಾರ್ಯಕಾರಿ ನಿರ್ಮಾಪಕರಾದ ಸತೀಶ್‌ಚಂದ್ರ ಶೆಟ್ಟಿ, ವಿನೋದ್‌ ಪ್ರಭಾಕರ್‌ ಎಲ್ಲರೂ ಚಿತ್ರತಂಡಕ್ಕೆ ಹಾರೈಸುವುದಕ್ಕೆ ಕೇಳಿಕೊಳ್ಳುವುದರ ಜೊತೆಗೆ ನಿರ್ಮಾಪಕ ಬಾಬು ರೆಡ್ಡಿ ಅವರನ್ನು ಕೊಂಡಾಡಿದರು.

ಬಹಳ ದಿನಗಳ ನಂತರ ಪತ್ರಿಕಾಗೋಷ್ಠಿಯೊಂದರಲ್ಲಿ ಕಾಣಿಸಿಕೊಂಡು ಮಾತನಾಡಿದ್ದು ವೀರಾಂಜನೇಯ ಪ್ರೊಡಕ್ಷನ್ಸ್‌ನ ಮುನಿರಾಜು. ಅವರು ಈ ಚಿತ್ರವನ್ನು ರಾಜ್ಯಾದ್ಯಂತ ವಿತರಿಸುತ್ತಿದ್ದಾರೆ. ಅವರಿಗೆ ಚಿತ್ರ ಶೂರ್‌ಶಾಟ್‌ ಗೆಲ್ಲುತ್ತದೆ ಎಂಬ ಅಪ್ಪಟ ನಂಬಿಕೆ ಇದೆ. ಅದ್ಯಾವ ಪರಿ ನಂಬಿಕೆ ಎಂದರೆ ಚಿತ್ರ 50 ಅಥವಾ 100 ದಿನಗಳ ಕಾಲ ಓಡದಿದ್ದರೆ ವಿತರಣೆ ಮಾಡುವುದನ್ನೇ ಬಿಟ್ಟುಬಿಡುತ್ತೀನಿ ಎಂದು ಹೇಳಿ ಚಪ್ಪಾಳೆ ಗಿಟ್ಟಿಸಿದರು. ಅದರಿಂದ ಉತ್ತೇಜಿತರಾದ ಮುನಿರಾಜು, “ನಾನು ಆಡಿಯೋ ಬಿಡುಗಡೆಯಲ್ಲೇ ಇಷ್ಟೊಂದು ವಿಷಿಲ್‌ ಕೇಳಿರಲಿಲ್ಲ. ಇದಕ್ಕೇ ಹೀಗಾದರೆ, ಚಿತ್ರ ಬಿಡುಗಡೆಯಾದ ಮೇಲೆ ಹೇಗೆ ಅಂತ ಯೋಚಿಸಿ. ವಿನೋದ್‌ ಪ್ರಭಾಕರ್‌ ಇದುವರೆಗೂ ಯಾರಿಗೂ ಬೇಕಾಗಿರಲಿಲ್ಲ. ಈ ಚಿತ್ರವಾದ ನಂತರ ನಿರ್ಮಾಪಕರು ಅವರನ್ನು ಹುಡುಕಿಕೊಂಡು ಬರುತ್ತಾರೆ. ನನಗೂ ಒಂದು ಸಿನಿಮಾ ಮಾಡಿಕೊಡಿ. ಈ ಸಿನಿಮಾ ಅಷ್ಟು ಚೆನ್ನಾಗಿ ಹೋಗುತ್ತೆ ಅನ್ನೋ ನಂಬಿಕೆ ಇದೆ. ಡೋಂಟ್‌ ವರಿ, ನಿಮ್ಮ ಇನ್ವೆಸ್ಟ್‌ಮೆಂಟ್‌ ಡಬ್ಬಲ್‌ ಮಾಡಿಕೊಡ್ತೀನಿ’ ಎಂದು ಮತ್ತೂಮ್ಮೆ ಮುನಿರಾಜು ಚಪ್ಪಾಳೆ ಗಿಟ್ಟಿಸಿ, ಮಾತು ಮುಗಿಸಿದರು.
-ಉದಯವಾಣಿ

Write A Comment