ನವದೆಹಲಿ(ಫೆ. 15): ಕರ್ನಾಟಕದ ಮೈಸೂರು ಮತ್ತು ಜಾರ್ಖಂಡ್’ನ ಧನಬಾದ್ ದೇಶದ ಅತ್ಯಂತ ಸ್ವಚ್ಛ ಮತ್ತು ಅತ್ಯಂತ ಕೊಳಕು ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿವೆ. ಸ್ವಚ್ಛ ಭಾರತ ಯೋಜನೆಗೆ ಒತ್ತುನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿಯೇ ಅತ್ಯಂತ ಕೊಳಕು ನಗರಗಳ ಪೈಕಿ ಒಂದೆನಿಸಿರುವುದು ಗಮನಾರ್ಹ. ಈ ವರ್ಷದ ಸ್ವಚ್ಛ್ ಸರ್ವೇಕ್ಷಣ್’ನ ಸಮೀಕ್ಷೆಯಲ್ಲಿ 73 ನಗರಗಳನ್ನು ಅವುಗಳ ಸ್ವಚ್ಛತೆಯ ಆಧಾರದಲ್ಲಿ ಪಟ್ಟಿ ಮಾಡಲಾಗಿದೆ. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಸೋಮವಾರ ಈ ಪಟ್ಟಿ ಬಿಡುಗಡೆ ಮಾಡಿದರು.
ಅತ್ಯಂತ ಸ್ವಚ್ಛ ನಗರಗಳು
1) ಮೈಸೂರು
2) ಚಂಡೀಗಢ
3) ತಿರುಚ್ಚಿ(ತಮಿಳುನಾಡು)
4) ನವದೆಹಲಿ
5) ವಿಶಾಖಪಟ್ನಂ, ಆಂಧ್ರಪ್ರದೇಶ
6) ಸೂರತ್, ಗುಜರಾತ್
7) ರಾಜಕೋಟ್, ಗುಜರಾತ್
8) ಗ್ಯಾಂಗ್ಟಕ್, ಸಿಕ್ಕಿಂ
9) ಪಿಂಪ್ರಿ-ಚಿಂಡವಾಡ, ಮಹಾರಾಷ್ಟ್ರ
10) ಗ್ರೇಟರ್ ಮುಂಬೈ, ಮಹಾರಾಷ್ಟ್ರ
ಅತ್ಯಂತ ಕೊಳಕು ನಗರಗಳು
1) ಧನಬಾದ್, ಜಾರ್ಖಂಡ್ (73)
2) ಅಸಾನ್ಸೋಲ್, ಬಂಗಾಳ (72)
3) ಇಟಾನಗರ್, ಅರುಣಾಚಲಪ್ರದೇಶ (71)
4) ಪಾಟ್ನಾ, ಬಿಹಾರ (70)
5) ಮೀರತ್, ಉ.ಪ್ರ. (69)
6) ರಾಯಪುರ್, ಚತ್ತೀಸ್’ಗಢ (68)
7) ಘಾಜಿಯಾಬಾದ್, ಉ.ಪ್ರ. (67)
8) ಜಮ್ಷೆಡ್’ಪುರ್, ಜಾರ್ಖಂಡ್ (66)
9) ವಾರಾಣಸಿ, ಉ.ಪ್ರ. (65)
10) ಕಲ್ಯಾಣ್ ದೊಂಬಿವಿಲಿ, ಮಹಾರಾಷ್ಟ್ರ (64)