ನವದೆಹಲಿ: ಅತ್ಯಾಚಾರ ಕೇಸ್`ಗಳ ಮೂಲಕ ಕುಖ್ಯಾತಿ ಪಡೆದಿರುವ ನವದೆಹಲಿಯಲ್ಲಿ ಮತ್ತೊಂದು ಹೇಯ ಕೃತ್ಯ ನಡೆದಿದೆ. ಗರ್ಭಾವಸ್ಥೆಯಲ್ಲಿದ್ದ 16 ವರ್ಷದ ಯುವತಿ ಗರ್ಭಪಾತಕ್ಕೆಂದು ತೆರಳುತ್ತಿದ್ದ ವೇಳೆ ಸ್ನೇಹಿತನೇ ಅತ್ಯಾಚಾರ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಯುವತಿ ಮೆಟ್ರೋ ರೈಲು ನಿಲ್ದಾಣದಲ್ಲಿ ಭ್ರೂಣಕ್ಕೆ ಜನ್ಮ ನೀಡಿದ ಘಟನೆ ಕೇಶವಪುರಂನಲ್ಲಿ ನಡೆದಿದೆ.
`ಯುವತಿ ಕೇಶವಪುರಂ ಬಳಿಯ ಟಾಯ್ಲೆಟ್`ನಲ್ಲಿ ಕುಸಿದು ಬಿದ್ದಳು. ಆಕೆಯ ಮರ್ಮಾಂಗದಿಂದ ರಕ್ತಸ್ರಾವವಾಗುತ್ತಿತ್ತು. ಈ ಸಂದರ್ಭ ಮೆಟ್ರೋ ನಿಲ್ದಾಣದ ಮೆಡಿಕಲ್ ಸಿಬ್ಬಂದಿ ಆಕೆಯ ನರವಿಗೆ ಬಂದರು. ಯುವತಿ 5-6 ತಿಂಗಳ ಅಪ್ರಾಪ್ತ ಮಗುವಿಗೆ ಜನ್ಮ ನೀಡಿದಳು. ಆದರೆ, ಆ ಮಗು ಹುಟ್ಟುವಾಗಲೇ ಸಾವನ್ನಪ್ಪಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.