ನವದೆಹಲಿ: ಈ ಬಾರಿ ಪ್ರೇಮಿಗಳ ದಿನದಂದು ನೈತಿಕ ಪೊಲೀಸ್ ಗಿರಿ ನಡೆಸದಿರಲು ಬಜರಂಗದಳ ಹಾಗೂ ಶಿವಸೇನೆ ನಿರ್ಧರಿಸಿದ್ದು, ಇದರಿಂದ ಪ್ರೇಮಿಗಳ ದಿನವನ್ನು ತಮ್ಮ ಪ್ರಿಯಕರ ಅಥವಾ ಪ್ರಿಯತಮೆಯೊಂದಿಗೆ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿರುವ ಯುವಕರಿಗೆ ಸ್ವಲ್ಪ ಲಿರೀಫ್ ಸಿಕ್ಕಂತಾಗಿದೆ.
ಈ ಎರಡೂ ಸಂಘಟನೆಗಳು ತಮ್ಮ ಕಾರ್ಯಕರ್ತರಿಗೆ, ಪ್ರೇಮಿಗಳ ದಿನದಂದು ಯಾವುದೇ ಪ್ರೇಮ ಪಕ್ಷಿಗಳಿಗೆ ತೊಂದರೆ ಕೊಡದಂತೆ ಸ್ಪಷ್ಟವಾಗಿ ಸೂಚಿಸಿದೆ. ಅಲ್ಲದೆ ಕಿರುಕುಳ ನೀಡಿದೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿವೆ,
ಪ್ರೇಮಿಗಳ ದಿನದಂದು ಯಾವುದೇ ಯುವಕ ಅಥವಾ ಯುವತಿಯೊಂದಿಗೆ ಕೆಟ್ಟದ್ದಾಗಿ ವರ್ತಿಸಬೇಡಿ. ಪ್ರೇಮಿಗಳ ಮೇಲೆ ಹಲ್ಲೆ ಅಥವಾ ಅವರೊಂದಿಗೆ ಅಸಭ್ಯ ವರ್ತನೆಯನ್ನು ನಾನು ಸಹಿಸಿಕೊಳ್ಳುವುದಿಲ್ಲ ಎಂದು ಶಿವಸೇನಾ ಯುವ ಘಟಕದ ರಾಷ್ಟ್ರೀಯ ಮುಖ್ಯಸ್ಥ ಅದಿತ್ಯ ಠಾಕ್ರೆ ಅವರು ಹೇಳಿದ್ದಾರೆ.
ಇನ್ನು ಬಜರಂಗದಳ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ಸಂಚಾಲಕ ಸುರೇಂದ್ರ ಮಿಶ್ರಾ ಅವರು, ಯಾವುದೇ ಪ್ರೇಮಿಗಳಿಗೆ ತೊಂದರೆ ಕೊಡಬಾರದು ಎಂದು ಸಂಘಟನೆಯ ಉನ್ನತ ಮಟ್ಚದಲ್ಲಿ ನಿರ್ಧರಿಸಲಾಗಿದೆ ಎಂದಿದ್ದಾರೆ.