ರಾಷ್ಟ್ರೀಯ

ಪ್ರಧಾನಿ ಭೇಟಿ ಮಾಡಿದ ಬುಖಾರಿ, ಐಸಿಸ್ ವಿರುದ್ಧ ಹೋರಾಟದ ಹೆಸರಿನಲ್ಲಿ ಮುಗ್ಧ ಮುಸ್ಲಿಮರಿಗೆ ಕಿರುಕುಳ ನೀಡದಂತೆ ಆಗ್ರಹ

Pinterest LinkedIn Tumblr

bukhari-8ನವದೆಹಲಿ: ಮುಸ್ಲಿಂ ಯುವಕರ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಅಹ್ಮದ್ ಬುಖಾರಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

ಈ ವೇಳೆ ಐಸಿಸ್ ವಿರುದ್ಧದ ಹೋರಾಟದ ಹೆಸರಿನಲ್ಲಿ ಮುಗ್ಧ ಮುಸ್ಲಿಮರಿಗೆ ಕಿರುಕುಳ ನೀಡದಂತೆ ಶಾಹಿ ಇಮಾಮ್ ಅಹ್ಮದ್ ಬುಖಾರಿ ಆಗ್ರಹಿಸಿದ್ದಾರೆ ಎಂದು ವರದಿ ಮಾಡಲಾಗಿದೆ.

ಭಯೋತ್ಪಾದನೆ ಆರೋಪದ ಮೇಲೆ ಬಹಳಷ್ಟು ಮುಸ್ಲಿಂ ಯುವಕರ ಈಗ ಜೈಲಿನಲ್ಲಿದ್ದಾರೆ ಎಂದು ಬುಖಾರಿ ಹೇಳಿದ್ದಾರೆ.

ಶಾಹಿ ಇಮಾಮ್ ಕಚೇರಿಯ ಪ್ರಕಾರ, ಬುಖಾರಿ ಅವರು ಮುಸ್ಲಿಂ ಯುಕರ ಬಂಧನದ ಕುರಿತು ಪಾರದರ್ಶಕತೆ ಇರಲಿ ಎಂದು ಪ್ರಧಾನಿಗೆ ಒತ್ತಾಯಿಸಿದ್ದಾರೆ.

‘ಪ್ರಧಾನಿಯವರು ತಮ್ಮ ಬೇಡಿಕೆಯನ್ನು ಪರಿಗಣಿಸುವುದಾಗಿ ಭರವಸೆ ನೀಡಿದ್ದಾರೆ ಮತ್ತು ಕೋಮು ಸಾಮರಸ್ಯ ಹಾಳುಮಾಡುವಂತ ಯಾವುದೇ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ’ ಎಂದು ಬುಖಾರಿ ತಿಳಿಸಿದ್ದಾರೆ.

Write A Comment