ರಾಷ್ಟ್ರೀಯ

ವಿದ್ಯಾರ್ಥಿ ದಿವ್ಯಾಂಶ ಕಕ್ರೋರಾ ಸಾವು ಪ್ರಕರಣ:ಸಿಬಿಐ ತನಿಖೆಗೆ ದೆಹಲಿ ಸರ್ಕಾರ ಆದೇಶ

Pinterest LinkedIn Tumblr

divya-8ನವದೆಹಲಿ: ದೆಹಲಿಯ ರ್ಯಾನ್ ಇಂಟರ್ ನ್ಯಾಷನಲ್ ಶಾಲೆಯ 1 ನೇ ತರಗತಿ ವಿದ್ಯಾರ್ಥಿ ದಿವ್ಯನಾಶ್ ಕಕ್ರೋರಾ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಸೋಮವಾರ ದೆಹಲಿ ಸರ್ಕಾರ ಆದೇಶಿಸಿದೆ.

ಕಳೆದ ಜನವರಿ 30ರಂದು 6 ವರ್ಷದ ದಿವ್ಯಾಂಶ ಶಾಲಾ ಶೌಚಾಲಯದಲ್ಲಿ ಬಿದ್ದು ಸಾವನ್ನಪ್ಪಿದ್ದ. ಬಳಿಕ ಶಾಲಾ ಸಿಬ್ಬಂದಿ ಈ ವಿಷಯವನ್ನು ಪೋಷಕರಿಗೆ ತಿಳಿಸುವ ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶಾಲೆಯಲ್ಲಿ ಸಂಭವಿಸಿದ ಈ ಘಟನೆ ಬಗ್ಗೆ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಮಧ್ಯೆ, ಪ್ರಾಥಮಿಕ ತನಿಖೆಯ ಪ್ರಕಾರ, ದಿವ್ಯಾಂಶ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರು ಇಂದು ಸ್ಪಷ್ಟಪಡಿಸಿದ್ದಾರೆ,

ಮರಣೋತ್ತರ ವರದಿ ಬಂದಿದ್ದು, ಮೇಲ್ನೋಟಕ್ಕೆ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಸಂದರ್ಭದಲ್ಲಿ ನಾನು ಇದಕ್ಕು ಹೆಚ್ಚು ಏನನ್ನು ಹೇಳಲು ಸಾಧ್ಯವಿಲ್ಲ ಎಂದು ಬಸ್ಸಿ ತಿಳಿಸಿದ್ದಾರೆ.

Write A Comment