ನವದೆಹಲಿ (ಏಜೆನ್ಸೀಸ್): ವಿಷಯಾಧಾರಿತ ಇಂಟರ್‌ನೆಟ್ ಬಳಕೆಗೆ ಅನುಗುಣವಾಗಿ ಡೇಟಾ ಟಾರಿಫ್ ಬದಲಿಸುವುದನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸೋಮವಾರ ನಿಷೇಧಿಸಿದೆ.
‘ವಿಷಯಾಧಾರಿತ ಸೇವೆಗೆ ಅನುಗುಣವಾಗಿ ಡೇಟಾ ಸೇವೆಯ ಬೆಲೆಯಲ್ಲಿ ತಾರತಮ್ಯ ಮಾಡುವಂತಿಲ್ಲ’ ಎಂದು ಟ್ರಾಯ್ ಆದೇಶಿಸಿದೆ.
‘ಡೇಟಾ ಟಾರಿಫ್‌ನಲ್ಲಿ ತಾರತಮ್ಯ ಸೃಷ್ಟಿಸುವಂಥ ಯಾವುದೇ ಬದಲಾವಣೆಗಳನ್ನು ಸೇವಾ ಕಂಪೆನಿಗಳು ಮಾಡುವಂತಿಲ್ಲ’ ಎಂದು ಟ್ರಾಯ್ ತನ್ನ ಆದೇಶದಲ್ಲಿ ತಿಳಿಸಿದೆ.
‘ಟಾರಿಫ್ ತಾರತಮ್ಯ ಉಂಟುಮಾಡುವಂಥ ಯಾವುದೇ ರೀತಿಯ ಒಪ್ಪಂದಗಳನ್ನು ಸೇವಾ ಕಂಪೆನಿಗಳು ಯಾರೊಂದಿಗೂ ಮಾಡಿಕೊಳ್ಳುವಂತಿಲ್ಲ’ ಎಂದು ಟ್ರಾಯ್ ಹೇಳಿದೆ.
ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಡೇಟಾ ಟಾರಿಫ್‌ನಲ್ಲಿ ಬದಲಾವಣೆ ಮಾಡುವಂತಿಲ್ಲ ಎಂದು ಟ್ರಾಯ್ ಸೂಚಿಸಿದೆ.