ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ಮಸಿ ಎರಚಿದ್ದ ಮಹಿಳೆಯನ್ನು ವೈಯಕ್ತಿಕ ಜಾಮೀನಿನ ಮೇಲೆ ಭಾನುವಾರ ರಾತ್ರಿ ಬಿಡುಗಡೆ ಮಾಡಲಾಗಿದೆ.
ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಯಶಸ್ಸಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾವನಾ ಎಂಬ ಮಹಿಳೆ ಕೇಜ್ರಿವಾಲ್ ಮೇಲೆ ಮಸಿ ಎರಚಿದ್ದರು. ನಂತರ ಮಹಿಳೆಯನ್ನು ಪೊಲೀಸರು ಬಂಧಿಸಿದ್ದರು. ಸೋಮವಾರ ಕೋರ್ಟಿಗೆ ಹಾಜರಾಗುವಂತೆ ಮಹಿಳೆಗೆ ಸೂಚಿಸಲಾಗಿದೆ.
ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಸಕಾರಾತ್ಮಕವಾದುದು, ಆದರೆ ಸಿಎನ್ಜಿ ಹಗರಣದ ಕಾರಣದಿಂದಾಗಿ ಸಮ-ಬೆಸ ವ್ಯವಸ್ಥೆ ಜಾರಿಗೆ ತರಲಾಯಿತು. ನಾನು ಈ ಕುರಿತು ಸ್ಟಿಂಗ್ ಆಪರೇಷನ್ ಮಾಡಿದ್ದೇನೆ. ಕೋರ್ಟಿನಲ್ಲಿ ಎಲ್ಲಾ ಸಾಕ್ಷ್ಯಾಧಾರಗಳನ್ನು ಮತ್ತು ದಾಖಲೆಗಳನ್ನು ಸಲ್ಲಿಸುತ್ತೇನೆ ಎಂದು ಭಾವನಾ ತಿಳಿಸಿದ್ದಾರೆ.