ನಾಸಿಕ್: ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ವಿಷಯ ಈ ವರ್ಷಾಂತ್ಯದ ವೇಳೆಗೆ ಬಗೆಹರಿಯಲಿದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.
ನಾಸಿಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತ ರಾಮಮಂದಿರ ನಿರ್ಮಾಣ ಮಾಡುವ ಬಗ್ಗೆ ಮುಸ್ಲಿಂ ಸಮುದಾಯದ ನಾಯಕರೊಂದಿಗೆ ಖುದ್ದು ತಾವೇ ಮಾತುಕತೆ ನಡೆಸುವುದಾಗಿ ಹೇಳಿರುವ ಸುಬ್ರಹ್ಮಣಿಯನ್ ಸ್ವಾಮಿ, ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ನಾಯಕರು, ವಕ್ಫ್ ಮಂಡಲಿ ಹಾಗೂ ಅಸಾವುದ್ದೀನ್ ಒವೈಸಿ ಅವರೊಂದಿಗೆ ತಾವೇ ಮಾತನಾಡುವುದಾಗಿ ತಿಳಿಸಿದ್ದು ವರ್ಷಾಂತ್ಯದ ವೇಳೆಗೆ ವಿವಾದ ಬಗೆಹರಿಯಲಿದೆ ಎಂದಿದ್ದಾರೆ.
ಇತಿಹಾಸದ ಪ್ರಕಾರ ರಾಮಮಂದಿರ ಅಯೋಧ್ಯೆಯಲ್ಲಿತ್ತು ಎಂಬುದು ಸಾಬೀತಾಗಿದ್ದು ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಮಸೀದಿಗಳನ್ನು ಎಲ್ಲಿಗೆ ಬೇಕಾದರೂ ಸ್ಥಳಾಂತರಿಸಬಹುದು ಎಂದು ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.