ಮದುವೆ ಎನ್ನುವುದು ಪ್ರತಿಯೊಬ್ಬ ಮಹಿಳೆಯರ ಜೀವನದ ಒಂದು ಅದ್ಭುತ ಕ್ಷಣ. ಮದುವೆಯ ನಂತರದ ಜೀವನ ಹೀಗಿರಬೇಕು, ಹಾಗಿದ್ದರೆ ಚೆಂದ, ನಾನು ಏನು ಮಾಡಿದರೆ ನನ್ನ ಪತಿ ಮತ್ತು ಆತನ ಮನೆಯವರು ಸಂತಸವಾಗುತ್ತಾರೆ ಎಂಬ ಹಲವಾರು ಪ್ರಶ್ನೆಗಳು ಯುವತಿಯರ ತಲೆಯಲ್ಲಿ ಓಡಾಡುತ್ತಿರುತ್ತದೆ. ಆ ಸಂದರ್ಭದಲ್ಲಿ ನೆರವಿಗೆ ಬರುವವರು ತಾಯಿ.
ಹಾಗಾದರೆ ಮದುವೆಯ ಬಗ್ಗೆ ತಾಯಿ ತನ್ನ ಮಗಳಿಗೆ ಯಾವ ರೀತಿಯ ವಿಷಯಗಳನ್ನು ತಿಳಿಸಬೇಕು ಇಲ್ಲಿದೆ ನೋಡಿ…
ಹೋದ ಮನೆಯನ್ನು ಪ್ರೀತಿ, ಸೌಹಾರ್ಧದಿಂದ ಬೆಳಗಬೇಕು, ಯಾರದೋ ಮಾತಿಗೆ ಓಗೊಡಬಾರದು.
ಅತ್ತೆಯನ್ನು ತಾಯಿಯಂತೆ ಕಂಡು ತಾಯಿಯ ಜೊತೆ ಯಾವ ರೀತಿ ಇರುತ್ತಿಯೋ ಅದರಂತೆ ಇದ್ದರೆ ಮುಂದಿನ ಜೀವನವೇ ಸುಂದರವಾಗುತ್ತದೆ.
ಪತಿಯ ಮನೆಯ ಅಂತಸ್ತನ್ನು ನೋಡಿ ಅವರ ಬಗ್ಗೆ ಗೌರವ ಪ್ರೀತಿ ತೋರಬೇಡ ಬದಲಾಗಿ ಹೃದಯದಿಂದ ಅವರನ್ನು ಪ್ರೀತಿಸುವುದನ್ನು ಕಲಿ.
ಹೊಸ ಮನೆಗೆ ಕಾಲಿಲಟ್ಟ ತಕ್ಷಣ ಅವರ ಬಗ್ಗೆ ನಿರ್ಧಾರ ಕೈಗೊಳ್ಳಬೇಡ. ಬದಲಾಗಿ ಅವರಿಗಾಗಿ ಸಮಯ ಮೀಸಲಿಡು. ಅವರೊಂದಿಗೆ ಹೆಚ್ಚಿನ ಸಮಯ ಕಳೆದು ಅವರ ಬಗ್ಗೆ ತಿಳಿದುಕೊಳ್ಳಬೇಕು.
ಯಾವತ್ತೂ ಆತ್ಮಾಭಿಮಾನವನ್ನು ಕಳೆದುಕೊಳ್ಳಬಾರದು.
ದೈಹಿಕ ಆಕರ್ಷಣೆಗಿಂತ ಮಾನಸಿಕ ಆಕರ್ಷಣೆ ಮುಖ್ಯ. ನೀನು ಭೋಗದ ವಸ್ತುವಾಗಿ ಪತಿಯ ಮನೆಯನ್ನು ಬೆಳಗಬೇಡ. ಅದರ ಬದಲು ಉತ್ತಮ ನಡತೆಯನ್ನು ರೂಪಿಸು.
ಸುಖ ಜೀವನವೇ ಬೇಕೆಂದು ತಪ್ಪುಗಳನ್ನು ಮಾಡಬೇಡ. ಬದಲಾಗಿ ಎಲ್ಲಾ ಪರಿಸ್ಥಿತಿಗಳಿಗೆ ಒಗ್ಗಿಕೊಂಡು ಹೋಗುವುದನ್ನು ಕಲಿಯಿರಿ.
ಮದುವೆಯಾದ ಮೊದಲ ದಿನಗಳಲ್ಲಿ ಹಲವಾರು ಅಗ್ನಿ ಪರೀಕ್ಷೆಯನ್ನು ಎದುರಿಸಬೇಕಾಗಬಹುದು. ಆದುದರಿಂದ ಸಂಯಮ ಅಗತ್ಯವಾಗಿ ಬೇಕಾಗಿದೆ.