ಡಿ.23- ಪ್ರತ್ಯೇಕ ತೆಲಂಗಾಣ ರಾಜ್ಯ ಉದಯವಾಗಿ ಎರಡನೆ ವರ್ಷಕ್ಕೆ ಕಾಲಿಡುತ್ತಿರುವಂತೆಯೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ಆಯೋಜಿಸಿರುವ ಆಯತ ಚಂಡಿಕಾಯಾಗ ಇಂದು ಅದ್ಧೂರಿಯಿಂದ ಆರಂಭಗೊಂಡಿತು.
ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ತೋಟದ ಮನೆಯಲ್ಲಿ ನಡೆಯುತ್ತಿರುವ ಐದು ದಿನಗಳ ಈ ಚಂಡಿಕಾಯಾಗದಲ್ಲಿ 1100 ಜನ ಋತ್ವಿಕ್ಕುಗಳು ಯಜ್ಞದಲ್ಲಿ ಪಾಲ್ಗೊಂಡಿದ್ದು, ಮುಖ್ಯಮಂತ್ರಿ ಮತ್ತು ಅವರ ಪತ್ನಿ ಋತ್ವಿಜರಾಗಿ ಯಾಗದ ದೀಕ್ಷೆ ಹಿಡಿದಿದ್ದಾರೆ.
1500ಕ್ಕೂ ಹೆಚ್ಚು ಜನ ವೇದ ಪಂಡಿತರು ವೇದಘೋಷ ಮೊಳಗಿಸುತ್ತಿದ್ದಾರೆ. ಕರ್ನಾಟಕದ ಶೃಂಗೇರಿ ಮಠದ ಪೀಠಕ್ಕೆ ಈ ಆಯತ ಚಂಡಿಯಾಗದ ಉಸ್ತುವಾರಿ ವಹಿಸಿಕೊಟ್ಟಿದ್ದು, ಶ್ರೀಮಠದ ವಿವಿಧ ಶಾಖೆಗಳ ನೂರಾರು ಜನ ಆಚಾರ್ಯರು ಯಾಗದಲ್ಲಿ ಭಾಗವಹಿಸಿದ್ದಾರೆ.