ರಾಷ್ಟ್ರೀಯ

ಪೆಟ್ರೋಲ್ ಬೆಲೆ 50 ಪೈಸೆ, ಡೀಸೆಲ್ 46 ಪೈಸೆ ಇಳಿಕೆ

Pinterest LinkedIn Tumblr

petrol30ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆಯಲ್ಲಿ ಕುಸಿತವಾಗಿರುವ ಹಿನ್ನೆಲೆಯಲ್ಲಿ ದೇಶದ ಪ್ರಮುಖ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸ್ವಲ್ಪ ಇಳಿಕೆ ಮಾಡಿವೆ.

ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 50 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 46 ಪೈಸೆ ಇಳಿಕೆ ಮಾಡಿದ್ದು, ಪರಿಸ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ಭಾರತೀಯ ತೈಲ ಕಂಪನಿಗಳು ತಿಳಿಸಿವೆ.

ಪರಿಸ್ಕೃತ ದರದ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ದರ ರು. 59.98 ಹಾಗೂ ಡೀಸೆಲ್ ರು.46.09 ರಷ್ಟಾಗಲಿದೆ.

Write A Comment