ರಾಷ್ಟ್ರೀಯ

ರಾಜಕಾರಣಿಗಳು ದುಷ್ಟರು, ಭ್ರಷ್ಟರಾಗಿದ್ದಾರೆ : ಸುಪ್ರೀಂ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕಟ್ಜು ಆಕ್ರೋಶ

Pinterest LinkedIn Tumblr

katjuನವದೆಹಲಿ, ನ.28- ದೇಶದ ಎಲ್ಲಾ ರಾಜಕಾರಣಿಗಳು ಭ್ರಷ್ಟರು ಹಾಗೂ  ಅಯೋಗ್ಯರು ಎಂದು ಕಟುವಾಗಿ ಟೀಕಿಸಿರುವ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು, ಈ ದೇಶದಲ್ಲಿ ಎಲ್ಲ ವ್ಯವಸ್ಥೆಗಳೂ  ಹಾಳಾಗಿವೆ. ಹಾಗಾಗಿ ಕ್ರಾಂತಿಯ ಮೂಲಕವೇ ಹೊಸ ವ್ಯವಸ್ಥೆಯನ್ನು ರೂಪಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಖಾಸಗಿ ಚಾನಲ್‌ವೊಂದಕ್ಕೆ ವಿಶೇಷ ಸಂದರ್ಶನ  ನೀಡಿರುವ ಅವರು, ರಾಜಕೀಯ ವ್ಯವಸ್ಥೆಯನ್ನು ಧ್ವಂಸ ಮಾಡುವ ಅಗತ್ಯವಿದೆ ಎಂದು ಕಿಡಿಕಾರಿದ್ದಾರೆ. ಬಿಜೆಪಿ ವಿವಿಧ ಉದ್ದೇಶಗಳಿಗೆ ಜನರನ್ನು ಒ

ಡೆಯುತ್ತಿದೆ. ಬೇರೆ ಪಕ್ಷಗಳು ಜಾತಿ ಆಧಾರದಲ್ಲಿ ಸಮಾಜವನ್ನು ವಿಭಜಿಸುತ್ತಿವೆ. ಎಲ್ಲಾ ಪಕ್ಷದವರು ಭ್ರಷ್ಟರು,    ಕ್ರಿಮಿನಲ್‌ಗಳು, ಗೂಂಡಾಗಳು ಎಂದು ಕಿಡಿಕಾರಿದ್ದಾರೆ. ಈ ದೇಶ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ಅದನ್ನು ಇಂದು ಹಾಳು ಮಾಡಿದ್ದಾರೆ. ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ. ನಿರುದ್ಯೋಗ, ಬಡತನ ತಾಂಡವವಾಡುತ್ತಿದೆ. ಸಂಸತ್‌ನಲ್ಲಿ ಸರಿಯಾದ ಚರ್ಚೆಗಳಾಗುತ್ತಿಲ್ಲ. ನ್ಯಾಯಾಲಯದಲ್ಲಿ ಒಂದು ಪ್ರಕರಣ ಇತ್ಯರ್ಥವಾಗಬೇಕಾದರೆ 25 ವರ್ಷ ಬೇಕು. ಅರ್ಧಕ್ಕರ್ಧ ನ್ಯಾಯಾಂಗವೇ ಭ್ರಷ್ಟಾಚಾರದ ಸೋಂಕಿಗೆ ಸಿಲುಕಿದೆ. ಅದರ ಭಾಗವಾಗಿದ್ದ ನನಗೆ ವ್ಯವಸ್ಥೆಯ ಸಂಪೂರ್ಣ ಅರಿವಿದೆ ಎಂದು ಹೇಳಿದ್ದಾರೆ. ಕಾರ್ಯಾಂಗವು ಕೂಡ ಭ್ರಷ್ಟಾಚಾರದ ಕೂಪವಾಗಿದೆ. ಇಡೀ ವ್ಯವಸ್ಥೆ ಹಾಳಾಗಿದೆ. ಶೂನ್ಯತೆ ಆವರಿಸಿದೆ. ಇದು ಬದಲಾಗಬೇಕಾದರೆ ಕ್ರಾಂತಿಯೇ ನಡೆಯಬೇಕು. ಸಾಮಾಜಿಕ ಸುವ್ಯವಸ್ಥೆ, ಘನತೆಯ ಬದುಕಿನ ವ್ಯವಸ್ಥೆಯನ್ನು ಕಲ್ಪಿಸುವುದಕ್ಕಾಗಿ ಹೊಸ ದೇಶಕಟ್ಟಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಜನ ಜಾಗೃತರಾಗಬೇಕು. ದೇಶಕ್ಕೆ ಕೋಮುವಾದ ಮತ್ತು ಭ್ರಷ್ಟಾಚಾರ ಎರಡೂ ಅಪಾಯಕಾರಿ. ಅಭಿವೃದ್ಧಿಗೆ ಇವು ಮಾರಕ. ಧರ್ಮ ಮತ್ತು ಜಾತಿ ಆಧಾರಿತವಾಗಿ ದೇಶವನ್ನು ವಿಭಜಿಸುವುದು ದೇಶದ ಹಾನಿಕಾರರ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯನ್ನು ಸರಿಪಡಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಫ್ರೆಂಚ್  ಕ್ರಾಂತಿಯ ಮಾದರಿಯಲ್ಲಿ ಕ್ರಾಂತಿಯಾಗಬೇಕು. ಈ ರಾಜಕಾರಣಿಗಳಿಂದ ಏನನ್ನೂ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮತಬ್ಯಾಂಕ್‌ಗಾಗಿ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ಕೆಂಡ ಕಾರಿದ್ದಾರೆ.

Write A Comment