ರಾಷ್ಟ್ರೀಯ

ತಿರುಪತಿಯಲ್ಲಿ ಮಳೆ, ಛತ್ರಕ್ಕೆ ನುಗ್ಗಿದ ನೀರು

Pinterest LinkedIn Tumblr

tirupathiಚೆನ್ನೈ/ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಶನಿವಾರ ರಾತ್ರಿಯಿಂದೀಚೆಗೆ ಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತಿರುಪತಿ, ತಿರುಮಲದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಗ್ಗುಪ್ರದೇಶಗಳ ಜನರಲ್ಲಿ ಆತಂಕ ಮೂಡಿಸಿದೆ.

ತಿರುಮಲದಲ್ಲಿ ಮೂರು ರಸ್ತೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ಗೋವಿಂದಸ್ವಾಮಿ ದೇವಸ್ಥಾನದ ಎರಡನೇ ಛತ್ರಕ್ಕೆ ನೀರು ನುಗ್ಗಿದೆ.  ಮುನ್ನೆಚ್ಚರಿಕೆ ಕ್ರಮವಾಗಿ ತಿರುಪತಿಯಿಂದ ತಿರುಮಲ ನಡುವಿನ ರಸ್ತೆಯನ್ನು ರಾತ್ರಿ 10.30 ರಿಂದ ಬೆಳಗಿನ ವರೆಗೆ ಬಂದ್ ಮಾಡಲಾಗಿದೆ.

ತಿರುಮಲದಲ್ಲಿ ನವೆಂಬರ್ ತಿಂಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗುತ್ತಿರುವು ದು ಇದೇ ಮೊದಲು. ಕಳೆದ ನವೆಂಬರ್‍ನಲ್ಲಿ 300ಮಿ.ಮೀ. ಮಳೆಯಾಗಿತ್ತು. ಅದೇ ಈವರೆಗಿನ ದಾಖಲೆಯಾಗಿತ್ತು.

ಈಗ 1000 ಮಿ.ಮೀ. ಮಳೆಯಾಗಿದೆ. ಮಳೆಯಿಂದಾಗಿ ತಿರುಪತಿಗೆ ಬಂದಿರುವ ಭಕ್ತರಿಗೂ ತೊಂದರೆಯಾಗಿದೆ. ಅವರು ಛತ್ರ, ಲಾಡ್ಜ್ ಗಳಿಂದ ಹೊರಬರಲಾಗದ ಸ್ಥಿತಿ ಇದೆ.

Write A Comment