ರಾಷ್ಟ್ರೀಯ

ಸುಳ್ಳು ವಿವಾಹದ ಭರವಸೆ ನೀಡಿ ಮಹಿಳೆಗೆ ವಂಚಿಸಿದ ಅರುಣಾಚಲ ಸಭಾಪತಿ

Pinterest LinkedIn Tumblr

arunaಇಟಾನಗರ್: ಅರುಣಾಚಲ ಪ್ರದೇಶ ಸಭಾಪತಿ ನಬಮ್ ರೇಬಿಯಾ ವಿರುದ್ಧ ದೈಹಿಕ ಹಲ್ಲೆ, ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ  ಲೈವ್ ಇನ್ ಟುಗೇದರ್‌ನಲ್ಲಿದ್ದ ಮಹಿಳೆಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಹಿಳಾ ಹಕ್ಕುಗಳ ಆಯೋಗದ ನೋಟಿಸ್‌ಗೆ ಉತ್ತರ ನೀಡಲು ಸ್ಪೀಕರ್ ವಿಫಲವಾದ ಹಿನ್ನೆಲೆಯಲ್ಲಿ ನಬಮ್ ರೇಬಿಯಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 2011 ರಿಂದ ಲಿವಿಂಗ್ ಟುಗೇದರ್‌ನಲ್ಲಿದ್ದ ರೇಬಿಯಾ ನನ್ನನ್ನು ಮದುವೆಯಾಗುವುದಾಗಿ ಸುಳ್ಳು ಹೇಳಿದ್ದಲ್ಲದೇ, ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಮಾಧ್ಯಮಗಳು ದೊಯಿಮುಖ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ರೇಬಿಯಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಕಳೆದ 2011 ರಿಂದ 2015ರವರೆಗೆ ಮಹಿಳೆಯೊಂದಿಗೆ ಲಿವಿಂಗ್ ಟುಗೇದರ್‌ ಸಂಬಂಧ ಹೊಂದಿರುವ ನಬಮ್ ರೇಬಿಯಾ, ಇದೀಗ ಆಕೆಯನ್ನು ದೂರ ಮಾಡಲು ಪ್ರಯತ್ನಿಸುತ್ತಿರುವುದು,ಕಾನೂನುಬದ್ಧವಾದ ವಿವಾಹಕ್ಕೆ ಮುಂದಾಗದಿರುವುದು ವಿವಾದಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

Write A Comment