ರಾಷ್ಟ್ರೀಯ

ವಿಶ್ವಸಂಸ್ಥೆಯಲ್ಲಿ ಭಾರತದ ಮುಂದಿನ ಖಾಯಂ ಪ್ರತಿನಿಧಿಯಾಗಿ ಸೈಯದ್ ಅಕ್ಬರುದ್ದೀನ್ ನೇಮಕ

Pinterest LinkedIn Tumblr

AKBARUDDIN

ಹೊಸದಿಲ್ಲಿ,ನ.16: ಹಿರಿಯ ರಾಜತಾಂತ್ರಿಕ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಾಜಿ ವಕ್ತಾರ ಸೈಯದ್ ಅಕ್ಬರುದ್ದೀನ್ ಅವರನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯನ್ನಾಗಿ ನೇಮಿಸಲಾಗಿದ್ದು, ಅವರು ಅಶೋಕ ಮುಖರ್ಜಿಯವರ ಉತ್ತರಾಧಿಕಾರಿಯಾಗಲಿದ್ದಾರೆ.

1985ರ ತಂಡದ ಐಎಫ್‌ಎಸ್ ಅಧಿಕಾರಿ ಯಾಗಿರುವ ಅಕ್ಬರುದ್ದೀನ್ ಪ್ರಸಕ್ತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದಾರೆ.

ವಕ್ತಾರನಾಗಿ ತನ್ನ ಮೂರೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಸಚಿವಾಲಯದ ಪ್ರಚಾರ ವಿಭಾಗದಲ್ಲಿ ಹೊಸತನವನ್ನು ತಂದ ಹೆಗ್ಗಳಿಕೆ ಅವರದ್ದಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಕ್ಕೆ ಒತ್ತು ನೀಡುವಿಕೆ ಮತ್ತು ಪ್ರಮುಖ ವಿಷಯಗಳಲ್ಲಿ ಅದರ ನಿಲುವಿನ ಸಮರ್ಥ ಪ್ರತಿಪಾದನೆ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಅಕ್ಬರುದ್ದೀನ್ ಅವರ ಮುಖ್ಯ ಕರ್ತವ್ಯವಾಗಿರಲಿದೆ. ದಿಲ್ಲಿಯಲ್ಲಿ ಇತ್ತೀಚಿಗೆ ಯಶಸ್ವಿಯಾಗಿ ನಡೆದ ಭಾರತ-ಆಫ್ರಿಕಾ ಶೃಂಗಸಭೆಯ ಮುಖ್ಯ ಸಮನ್ವಯಕಾರನಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಅವರು ಜಿನಿವಾದಲ್ಲಿರುವ ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.

Write A Comment