ರಾಷ್ಟ್ರೀಯ

ಪೆಟ್ರೋಲ್ ಲೀ.ಗೆ 36 ಪೈಸೆ, ಡೀಸೆಲ್ ಲೀ.ಗೆ 87 ಪೈಸೆ ಏರಿಕೆ

Pinterest LinkedIn Tumblr

petrolಹೊಸದಿಲ್ಲಿ,ನ.15: ಸಾರ್ವಜನಿಕರಂಗದ ತೈಲಸಂಸ್ಥೆಗಳು ಪೆಟ್ರೋಲ್ ದರದಲ್ಲಿ ಲೀಟರ್‌ಗೆ 36 ಪೈಸೆ ಹಾಗೂ ಡೀಸೆಲ್ ದರದಲ್ಲಿ ಲೀಟರ್‌ಗೆ 87 ಪೈಸೆ ಏರಿಕೆ ಮಾಡಿವೆ. ರವಿವಾರ ಮಧ್ಯರಾತ್ರಿಯಿಂದಲೇ ನೂತನ ದರ ಏರಿಕೆ ಜಾರಿಗೆ ಬಂದಿವೆ.
ತೈಲ ದರ ಪರಿಷ್ಕರಣೆಯಿಂದಾಗಿ ದಿಲ್ಲಿಯಲ್ಲಿ ಪೆಟ್ರೋಲ್ ದರವು 60.70 ರೂ.ನಿಂದ 61.06 ರೂ.ಗೇರಲಿದೆ. ಅದೇ ರೀತಿ ಡೀಸೆಲ್ ದರವು ಲೀಟರ್‌ಗೆ 45.93 ರೂ.ನಿಂದ 46.80 ರೂ.ಗೇರಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರಗಳು ಸ್ಥಿರತೆಯನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ದರಗಳಲ್ಲಿ ಏರಿಕೆ ಮಾಡಲಾಗಿದೆಯೆಂದು ದೇಶದ ಅತಿ ದೊಡ್ಡ ತೈಲ ಮಾರಾಟ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
ಈ ವರ್ಷದ ಜುಲೈ 16ರಂದು ಕೊನೆಯ ಬಾರಿಗೆ ಪೆಟ್ರೋಲ್ ದರದಲ್ಲಿ ಏರಿಕೆಯಾಗಿದ್ದು, ಪ್ರತಿ ಲೀಟರ್‌ಗೆ 32 ಪೈಸೆ ಹೆಚ್ಚಳವಾಗಿತ್ತು. ಆನಂತರ ನಾಲ್ಕು ಬಾರಿ ಪೆಟ್ರೋಲ್ ದರಗಳನ್ನು ಇಳಿಸಲಾಗಿತ್ತು. ಆಗಸ್ಟ್ 1 ರಂದು 2.43 ರೂ., ಆಗಸ್ಟ್ 14ರಂದು 1.27 ರೂ., ಸೆಪ್ಟೆಂಬರ್ 1ರಂದು 2 ರೂ., ನವೆಂಬರ್ 1ರಂದು 50 ಪೈಸೆಯಷ್ಟು ಪೆಟ್ರೋಲ್ ಬೆಲೆ ಇಳಿಕೆಯಾಗಿತ್ತು, ಸೆ.1ರಂದು ಡೀಸೆಲ್ ದರದಲ್ಲಿ 50 ಪೈಸೆ ಇಳಿಕೆ ಮಾಡಲಾಗಿದ್ದು, ಆನಂತರ ದರ ಪರಿಷ್ಕರಣೆಯಾಗಿರಲಿಲ್ಲ.

Write A Comment