ರಾಷ್ಟ್ರೀಯ

ಮೇಲ್ದರ್ಜೆಯ ರೈಲ್ವೆ ಪ್ರಯಾಣ ಇನ್ನು ತುಟ್ಟಿ

Pinterest LinkedIn Tumblr

Train2ಹೊಸದಿಲ್ಲಿ,ನ.15: ಶೇ.14 ಸೇವಾ ತೆರಿಗೆ ಮತ್ತು ಶೇ.0.5 ಸ್ವಚ್ಛ ಭಾರತ ಮೇಲ್ತೆರಿಗೆ ಇಂದಿನಿಂದ ಜಾರಿಗೊಳ್ಳುವುದರೊಂದಿಗೆ ರೈಲ್ವೆಯ ಮೇಲ್ದರ್ಜೆಗಳಲ್ಲಿ ಪ್ರಯಾಣ ಇಂದಿನಿಂದ ದುಬಾರಿಯಾಗಿದೆ.
ನ.15ರಿಂದ ನೂತನ ತೆರಿಗೆಗಳು ಜಾರಿಯಾಗುವುದರೊಂದಿಗೆ ಮೊದಲ ದರ್ಜೆ ಮತ್ತು ಎಲ್ಲ ಹವಾ ನಿಯಂತ್ರಿತ ಬೋಗಿಗಳ ಪ್ರಯಾಣ ದರಗಳಲ್ಲಿ ಶೇ.4.35ರಷ್ಟು ಏರಿಕೆಯಾಗಿದೆ ಎಂದು ರೈಲ್ವೆ ಸಚಿವಾಲಯವು ತಿಳಿಸಿದೆ. ಎಲ್ಲ ತೆರಿಗೆಯೋಗ್ಯ ಸೇವೆಗಳ ಮೇಲೆ ಸ್ವಚ್ಛ ಭಾರತ ಮೇಲ್ತೆರಿಗೆಯನ್ನು ಹೇರಿ ಸರಕಾರವು ನ.6ರಂದು ಹೊರಡಿಸಿದ್ದ ಅಧಿಸೂಚನೆಗೆ ಅನುಗುಣವಾಗಿ ಪ್ರಯಾಣಿಕ ದರಗಳನ್ನು ಹೆಚ್ಚಿಸಲಾಗಿದೆ.
ಒಟ್ಟೂ ಪ್ರಯಾಣ ದರದ ಶೇ.30ರಷ್ಟಕ್ಕೆ ಸೇವಾ ತೆರಿಗೆ ಮತ್ತು ಮೇಲ್ತೆರಿಗೆಯನ್ನು ವಿಧಿಸಲಾಗುತ್ತಿದ್ದು, ಇದು ಮೊದಲ ದರ್ಜೆ ಮತ್ತು ಎಲ್ಲ ಎಸಿ ದರ್ಜೆಗಳಲ್ಲಿ ಪ್ರಯಾಣ ಶುಲ್ಕದ ಶೇ.4.35ರಷ್ಟಾಗುತ್ತದೆ. ಆದರೆ ಸಾಮಾನ್ಯ ದರ್ಜೆ ಮತ್ತು ಸ್ಲೀಪರ್ ಕ್ಲಾಸ್‌ಗಳಲ್ಲಿ ಪ್ರಯಾಣಕ್ಕೆ ಸೇವಾ ತೆರಿಗೆಯು ಅನ್ವಯವಾಗುವುದಿಲ್ಲ. ಈ ತೆರಿಗೆಗಳಿಂದ ವಾರ್ಷಿಕ ಸುಮಾರು 1,000 ಕೋ.ರೂ.ಆದಾಯ ಲಭಿಸುವ ನಿರೀಕ್ಷೆಯಿದೆ. ಪ್ರಯಾಣಿಕ ವಿಭಾಗದಿಂದ ರೈಲ್ವೆಗೆ ಈ ವರ್ಷ ಸುಮಾರು 35,000 ಕೋ.ರೂ.ಆದಾಯವನ್ನು ಅಂದಾಜಿಸಲಾಗಿದೆ.

Write A Comment