ರಾಷ್ಟ್ರೀಯ

ಬಯಲಾಗುತ್ತಾ ಸುನಂದಾ ಪುಷ್ಕರ್ ಸಾವಿನ ರಹಸ್ಯ?

Pinterest LinkedIn Tumblr

sunanda

ಮುಂಬೈ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ಸಿಕ್ಕಿದೆ. ಅಮೆರಿಕಾದ ಎಫ್‍ಬಿಐ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿ ದೆಹಲಿ ಪೊಲೀಸರ ಕೈ ಸೇರಿದ್ದು ದೇಶಾದ್ಯಂತ ಸಂಚಲನವನ್ನು ಮೂಡಿಸಿದ್ದ ಪ್ರಕರಣವಾಗಿರುವ ಸುನಂದಾ ಅವರ ಸಾವು ಕೊಲೆಯೋ ಆತ್ಮಹತ್ಯೆಯೋ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ.

ಅಮೆರಿಕಾದ ಎಫ್‍ಬಿಐ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿರುವ ಬಹುನಿರೀಕ್ಷಿತ ವರದಿಯಲ್ಲಿ, ಮೃತದೇಹದಲ್ಲಿ ರೆಡಿಯೋಎಕ್ಟಿವ್ ವಸ್ತುಗಳು ಪತ್ತೆಯಾಗಿಲ್ಲವೆಂದು ಹೇಳಿದೆ.

ವರದಿ ಈಗಾಗಲೇ ದೆಹಲಿ ಪೊಲೀಸರ ಕೈ ಸೇರಿದ್ದು, ಆದಷ್ಟು ಬೇಗ ಸಾವಿಗೆ ನಿಖರ ಕಾರಣ ಬಹಿರಂಗವಾಗುವ ಸಾಧ್ಯತೆ ಇದೆ.

ದೆಹಲಿಯ ಚಾಣಕ್ಯಪುರಿಯ ಲೀಲಾ ಪ್ಯಾಲೆಸ್ ಪಂಚತಾರಾ ಹೊಟೆಲ್ ನ ರೂಮ್ ನಂಬರ್. 345ರಲ್ಲಿ ಜನವರಿ 17ರ ರಾತ್ರಿ ಸುನಂದಾ ಪುಷ್ಕರ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು. ಅವರದು ಸಹಜ ಸಾವೋ ಅಥವಾ ಆತ್ಮಹತ್ಯಯೋ ಎಂಬುದು ಇಲ್ಲಿಯವರೆಗೂ ರಹಸ್ಯವಾಗಿಯೇ ಉಳಿದಿದೆ.

Write A Comment